ಲಕ್ನೋ: ಕರ್ತವ್ಯನಿರತ ಪೊಲೀಸ್‌ಗೆ ಮಹಿಳೆಯೊಬ್ಬಳು ಚಪ್ಪಲಿಯಿಂದ ಹೊಡೆದ ನಡೆದ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋನ ಚಾರ್‌ಬಾಗ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಗುರುವಾರ ರಾತ್ರಿ ಚಾರ್‌ಬಾಗ್ ರೈಲು ನಿಲ್ದಾಣದಲ್ಲಿ ಫುಟ್‌ಓವರ್ ಬ್ರಿಡ್ಜ್ ಮೇಲೆ ಆಟವಾಡುತ್ತಿದ್ದ ಬಾಲಕಿಗೆ ಪೊಲೀಸ್ ಸಿಬ್ಬಂದಿ ಲಾಠಿಯಿಂದ ಹೊಡೆದು ಕೈ ಮುರಿದಿದ್ದರು ಎನ್ನಲಾಗಿದೆ. ಆಕ್ರೋಶಗೊಂಡ ಮಹಿಳೆ ಪ್ರತಿಭಟಿಸಿದಾಗ ಪೊಲೀಸ್ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾರೆ. ವಿವಾದ ವಿಕೋಪಕ್ಕೆ ಹೋದಾಗ ಪೊಲೀಸ್ ಮಹಿಳೆಗೆ ಲಾಠಿಯಿಂದ ಥಳಿಸುವುದಾಗಿ ಬೆದರಿಕೆ ಹಾಕಿದ್ದು, ಆಕೆ ಸಿಟ್ಟಿಗೆದ್ದಿದ್ದಾಳೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದ ಬಳಿಕ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಮಹಿಳೆಯು ಪೊಲೀಸ್‌ಗೆ ಚಪ್ಪಲಿಯಿಂದ ಥಳಿಸಿದ್ದಾರೆ. ಪೊಲೀಸ್ ಕೂಡ ಮಹಿಳೆಯನ್ನು ತಳ್ಳಿದಾಗ ಆಕೆ ಬಿದ್ದಿದ್ದಾಳೆ. ಆದರೆ ಮಹಿಳೆ ಜತೆಗಿದ್ದ ವ್ಯಕ್ತಿ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈ ಸಮಯದಲ್ಲಿ ಆರ್‌ಪಿಎಫ್‌ನ ಮಹಿಳಾ ಕಾನ್‌ಸ್ಟೆಬಲ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಕೊಳಿಸಿದ್ದಾರೆ. ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಜಿಆರ್‌ಪಿ ಮತ್ತು ಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದು, ಪ್ರಯಾಣಿಕರೊಬ್ಬರು ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
PublicNext
20/03/2022 08:10 am