ಬೆಳಗಾವಿ: ಪ್ರತಿಷ್ಟಿತ ಹೋಟೆಲ್ ಕೋಣೆಯೊಂದರಲ್ಲಿ ವಜ್ರದ ಬಳೆ ಕಳುವಾದ ಬಗ್ಗೆ ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಕ್ಕರೆ ಕಾರ್ಖಾನೆಗಳ ಮಾನವ ಸಂಪನ್ಮೂಲ ಅಧಿಕಾರಿಯಾಗಿರುವ ಹರಿಯಾಣ ಗುರಗಾಂವ್ ಮೂಲದ ಶಿಪ್ರಾ ಬಿಜಾವತ್ ಎಂಬುವರು ಕಾಕತಿಯ ಮ್ಯಾರಿಯಟ್ ಹೊಟೇಲ್‌ನ ಕೋಣೆಯೊಂದರಲ್ಲಿ ತಂಗಿದ್ದರು.
ನಿನ್ನೆ ಬುಧವಾರ ಬೆಳಿಗ್ಗೆ 11 ಗಂಟೆಗೆ ಕೆಲಸದ ಹಿನ್ನೆಲೆ ಕೋಣೆಯಿಂದ ಆಚೆ ಹೋಗಿದ್ದ ಶಿಪ್ರಾ ಅವರು ರಾತ್ರಿ 10-30ಕ್ಕೆ ಕೋಣೆಗೆ ವಾಪಾಸ್ ಬಂದಿದ್ದಾರೆ. ಆಗ ಶಿಪ್ರಾ ಅವರ ಬ್ಯಾಗ್ ತೆರೆದ ಸ್ಥಿತಿಯಲ್ಲಿತ್ತು. ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ವಜ್ರದ ಹರಳಿನ ಬಳೆ ಇರಲಿಲ್ಲ. ಬಾತ್ ರೂಮ್‌ನಲ್ಲಿ ಬೇರೆಯವರು ಸ್ನಾನ ಮಾಡಿದ್ದು ಕೂಡ ಗೊತ್ತಾಗಿದೆ. ಇದಕ್ಕೆ ಪುರಾವೆಯಾಗಿ ಒದ್ದೆಯಾಗಿದ್ದ ಟವೆಲ್‌ಅನ್ನು ಕುರ್ಚಿ ಮೇಲೆ ಹಾಕಿರುವುದು ಕಂಡು ಬಂದಿದೆ. ಕೂಡಲೇ ಶಿಪ್ರಾ ಅವರು ಹೋಟೆಲ್ ಸಿಬ್ಬಂದಿಗೆ ತಿಳಿಸಿದಾಗ, ಅವರು ನಮ್ಮಲ್ಲಿ ಈ ರೀತಿ ಆಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ನಂತರ ಹೋಟೆಲ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಶಿಪ್ರಾ ಅವರು ತಂಗಿದ್ದ ಕೋಣೆಗೆ ಒಬ್ಬ ಪುರುಷ ಹಾಗೂ ಓರ್ವ ಮಹಿಳೆ ಬಂದು ಹೋಗಿರುವುದು ಕಾಣಿಸಿದೆ. ಈ ಬಗ್ಗೆ ಶಿಪ್ರಾ ಬಿಜಾವತ್ ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
PublicNext
17/03/2022 01:50 pm