ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳ ಸೋಷಿಯಲ್ ಮೀಡಿಯಾ ಸ್ಟಾರ್ ಡೆಡ್-ಗಂಡನ ಮೇಲೆ ಅನುಮಾನ !

ದುಬೈ: ಕೇರಳದ ಹೆಸರಾಂತ ವ್ಲಾಗರ್ ಮತ್ತು ಮಲೆಯಾಳಂ ಆಲ್ಬಂ ಸ್ಟಾರ್ ದುಬೈನಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ಮೊನ್ನೆ ಮಂಗಳವಾರ ಈ ಘಟನೆ ನಡೆದಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಈಗ ಬೆಳೆದಿದೆ.

ಕೇವಲ 21 ವರ್ಷದ ರಿಫಾ ಮೆಹ್ನು ಸಾವಿನ ಸುತ್ತ ಅನುಮಾನಗಳೇ ಹೆಚ್ಚು ಕೇಳಿ ಬರುತ್ತಿವೆ. ರಿಫಾ ಮನೆಯವರು ಸದ್ಯ ಕೇರಳದ ಬಲ್ಸುರಿಯಲ್ಲಿ ದೂರು ದಾಖಲಿಸಿದ್ದಾರೆ.

ರಿಫಾ ಸಾವಿನ ಹಿಂದೆ ಏನೋ ಅನ್ಯಾಯ ನಡೆದಿದೆ ಎಂದು ದೂರಲಾಗುತ್ತಿದೆ.ಆದರೆ, ರಿಫಾ ಪತಿ ಹಾಗೂ ಅತ್ತೆ ಈ ಆರೋಪವನ್ನ ತಳ್ಳಿಹಾಕಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಆಧಾರಿಸಿಯೇ ಅವರು ಇದು ಆತ್ಮಹತ್ಯೆ ಅಂತಲೂ ಹೇಳುತ್ತಿದ್ದಾರೆ.ಆದರೆ ರಿಫಾ ಮತ್ತು ಆಕೆಯ ಪತಿಯ ನಡುವಿನ ಸಂಬಂಧ ಹಾಳಾಗಿತ್ತು ಅಂತಲೇ ರಿಫಾ ಆಪ್ತರು ಹೇಳಿಕೊಂಡಿದ್ದಾರೆ.

Edited By :
PublicNext

PublicNext

07/03/2022 07:20 am

Cinque Terre

53.82 K

Cinque Terre

0