ಬೆಳಗಾವಿ: ವ್ಯಕ್ತಿಯೋರ್ವ ಇಬ್ಬರು ಪತ್ನಿಯರು ದೂರವಾಗಿದ್ದಕ್ಕೆ 3ನೇ ಮದ್ವೆಯಾಗಿ ಕೊನೆಗೆ ಆಕೆಯಿಂದಲೇ ಕೊಲೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ಮೂವರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ನಿವಾಸಿ ಗಜಾನನ ನಾಯಕ್ ಪತ್ನಿಯಿಂದಲೇ ಕೊಲೆಯಾದ ದುರ್ದೈವಿ. ಇಬ್ಬರು ಪತ್ನಿಯರೂ ದೂರವಾಗಿದ್ದಕ್ಕೆ ಗಜಾನನ ನಾಯಕ್ ವಿಧವೆ ವಿದ್ಯಾ ಎಂಬಾಕೆಯನ್ನು ಮದುವೆಯಾಗಿದ್ದ. ಓರ್ವ ಮಗನ ಜೊತೆ ಬಸೂರ್ತೆ ಗ್ರಾಮದಲ್ಲಿ ಬೇಕರಿ ಇರಿಸಿಕೊಂಡು ಜೀವನ ನಡೆಸುತ್ತಿದ್ದರು. ಮದುವೆ ಬಳಿಕ ವಿದ್ಯಾ ಸಹ ತನ್ನ ಮಕ್ಕಳೊಂದಿಗೆ ಗಜಾನನ ಮನೆಯಲ್ಲಿ ವಾಸವಾಗಿದ್ದಳು.
ಗಜಾನನ ಮೂರನೇ ಪತ್ನಿ ವಿದ್ಯಾಳಿಗಾಗಿ ಸಾಲ ಮಾಡಿಕೊಂಡು ಮನೆ ಸಹ ಕಟ್ಟಿಸಿದ್ದರು. ಆದರೆ ಕೆಲ ದಿನಗಳಿಂದ ವ್ಯಾಪಾರ ಚೆನ್ನಾಗಿ ನಡೆಯದ ಕಾರಣ ಗಜಾನನ ಬೇಕರಿ ಮುಚ್ಚಿದ್ದರು. ಆರ್ಥಿಕ ನಷ್ಟವಾದ ಹಿನ್ನೆಲೆ ಮನೆ ಮಾರಲು ಗಜಾನನ ನಿರ್ಧರಿಸಿದ್ದರು. ಆದ್ರೆ ವಿದ್ಯಾ ಮನೆ ಮಾರಾಟಕ್ಕೆ ಒಪ್ಪಿರಲಿಲ್ಲ. ಫೆಬ್ರವರಿ 21ರಂದು ಪತಿಗೆ ತನ್ನ ಮಗನನ್ನು ಊರಿನಲ್ಲಿ ಬಿಟ್ಟು ಬಾ ಅಂತ ಹೇಳಿದ್ದಾಳೆ. ಪತ್ನಿ ಮಾತು ಕೇಳಿದ ಗಜಾನನ ಮೊದಲ ಮಗನನ್ನು ಬೆಳಗುಂದಿ ಗ್ರಾಮದಲ್ಲಿ ಬಿಟ್ಟು ಬಸೂರ್ತೆಗೆ ಬಂದಿದ್ದಾನೆ. ಮನೆಗೆ ಪತಿಗೆ ವಿದ್ಯಾ ಕಂಠಪೂರ್ತಿ ಮದ್ಯ ಕುಡಿಸಿದ್ದಾಳೆ. ನಶೆಯಲ್ಲಿ ಗಜಾನನ ಮಲಗುತ್ತಿದ್ದಂತೆ ಮನೆಗೆ ಬಂದ ಹೃತಿಕ್ ಮತ್ತು ಪರಶುರಾಮ್ ಕತ್ತು ಸೀಳಿ ಗಜಾನನ ಕೊಲೆ ಮಾಡಿದ್ದಾರೆ.
ಕೊಲೆ ಬಳಿಕ ಗಜಾನನ ಡೈರಿ, ಮೊಬೈಲ್ ಫೋನ್ ಜತೆ ಮೂವರು ಎಸ್ಕೇಪ್ ಆಗಿದ್ದರು. ಮರು ದಿನ ಗಜಾನನ ಮಗ ಅವಧೂತ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾ ಪಾಟೀಲ್ ಮೇಲೆ ಅವಧೂತ್ ಸಂಶಯ ವ್ಯಕ್ತಪಡಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
PublicNext
05/03/2022 07:59 am