ಯಾದಗಿರಿ : ಜಿಲ್ಲೆಯ ಸುರಪುರ ತಾಲೂಕಿನ ಅರಕೇರಾ (ಕೆ) ಗ್ರಾಮ ಪಂಚಾಯತಿ ಪಿಡಿಓ ದುರ್ಗ ಶ್ರೀ ಮತ್ತು ಕಂಪ್ಯೂಟರ್ ಆಪರೇಟರ್ ಕರ್ತವ್ಯದ ಸಮಯದಲ್ಲಿ ಸಾರ್ವಜನಿಕರಿಂದ ಲಂಚ ಸ್ವೀಕರಿಸಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬರುವ ಕೃಷಿ ಹೊಂಡ, ಬದು ನಿರ್ಮಾಣ, ನಾಲಾ ಹೂಳು ತೆಗೆಯುವುದು ಸೇರಿದಂತೆ ಅನೇಕ ಮೆಟಿರಿಯಲ್ ಕಾಮಗಾರಿಗಳಿಗೆ ಲಂಚ ಪಡೆಯುವುದು ಸಾಮಾನ್ಯವಾಗಿತ್ತು.
ಸದ್ಯ ಪಿಡಿಓ ದುರ್ಗಾ ಶ್ರೀ ಅವರನ್ನು ಅಮಾನಾತು ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಸಂಘಟನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ. ಜಲ್ಲಪ್ಪನೋರ ಹಾಗೂ ಸದಸ್ಯರು ಜಿಪಂ ಸಿಇಓ ಅಂಬರೇಶ್ ನಾಯ್ಕ ಅವರಿಗೆ ನಿನ್ನೆ ಮನವಿ ಸಲ್ಲಿಸಿದ್ದರು.
ಇಂದು ಪಿಡಿಓ ದುರ್ಗಾ ಶ್ರೀಯನ್ನು ಸಿಇಓ ಅವರು ಸಸ್ಪೆಂಡ್ ಮಾಡಿದ್ದಾರೆ.
ಇನ್ನು ಇದೊಂದೇ ಗ್ರಾಪಂ ಅಲ್ಲದೆ ಜಿಲ್ಲೆಯ ಕೆಲ ಗ್ರಾಪಂಗಳಲ್ಲಿ ಉದೋಗ ಖಾತ್ರಿ ಕೆಲಸದ ಮೊತ್ತದ ಮೇಲೆ ಆಯಾ ಫೈಲಿಗೆ 5 ಸಾವಿರದಿಂದ 30 ಸಾವಿರವೆರೆಗೆ ಪಿಡಿಓ, ಜೆಇ ಗಳು ಕಮಿಷನ್ ಪಡೆಯುತ್ತಾರೆ.
ಇದರ ಬಗ್ಗೆ ತನಿಖೆಯಾಗಬೇಕು ಎಂದು ಜಯ ಕರ್ನಾಟಕ ರಕ್ಷಣೆ ಸೇನೆ ಒತ್ತಾಯಿಸಿದೆ.
ವರದಿ: ಮೌನೇಶ ಬಿ.ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
24/02/2022 10:56 pm