ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಗಾವತಿಯಲ್ಲಿ ದುಷ್ಕರ್ಮಿಗಳ ಗ್ಯಾಂಗ್ ನಿಂದ ಹಲ್ಲೆ : ಇಬ್ಬರು ಯುವಕರ ಸ್ಥಿತಿ ಗಂಭೀರ

ಕೊಪ್ಪಳ : ಕೊಪ್ಪಳ ಜಿಲ್ಲೆ ಗಂಗಾವತಿಯ ಪ್ರಶಾಂತ ನಗರದ ಸಮೀಪ ಗಂಗಾವತಿಯ ಜನತೆ ಬೆಚ್ಚಿ ಬೀಳುವಂತ ಘಟನೆ ನಡೆದಿದೆ.

ಕೈಯಲ್ಲಿ ಕ್ರಿಕೆಟ್ ಸ್ಟಿಕ್, ಚಾಕು ಹಿಡಿದು ಹೋಟೆಲ್ ಗೆ ನುಗ್ಗುವ 10 ಕ್ಕೂ ಹೆಚ್ಚು ದುಷ್ಕರ್ಮಿಗಳು ಯುವಕರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಷಕ್ಷಾವಲಿ ಮತ್ತು ಸಲೀಂ ಎಂಬ ಯುವಕರ ಮೇಲೆ ಈ ಹಲ್ಲೆ ನಡೆದಿದ್ದು ಹಲ್ಲೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Edited By : Nagesh Gaonkar
PublicNext

PublicNext

19/02/2022 08:47 am

Cinque Terre

59.46 K

Cinque Terre

1