ಶಿವಮೊಗ್ಗ: ಪ್ರಸ್ತುತದಲ್ಲಿ ಬಹುತೇಕ ಮನಸ್ಸುಗಳು ದುರ್ಬಲವಾಗುತ್ತಿವೆ. ಯಾವುದನ್ನು ಅರಗಿಸಿಕೊಳ್ಳಲಾಗದೇ ಸಾವೇ ಅಂತಿಮ ಎನ್ನುವ ನಿರ್ಣಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿವೆ.ಸದ್ಯ ಹೊಸನಗರ ತಾಲೂಕು ಬಿದರಹಳ್ಳಿಯಲ್ಲಿ ನೆರೆ ಮನೆಯ ವಿದ್ಯಾರ್ಥಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಪಕ್ಕದ ಮನೆಯ ಮಹಿಳೆ ಖಿನ್ನತೆಗೆ ಒಳಗಾಗಿ ತನ್ನ ಮಗಳೊಂದಿಗೆ ಬಾವಿಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯ ಸಾವಿಂದ ಭಯಗೊಂಡಿದ್ದ ಬಿದರಹಳ್ಳಿಯ ಚಿಟ್ಟಗದ್ದೆ ವಿದ್ಯಾ(32) ಪುತ್ರಿ ತನ್ವಿ(4) ಜೊತೆ ಬಾವಿಗೆ ಹಾರಿ ಸಾವನ್ನಪ್ಪಿದ್ದಾರೆ.ಹೆಂಡತಿ ಮಾನಸಿಕ ಖನ್ನತೆಗೆ ಒಳಗಾಗಿದ್ದನ್ನು ಅರಿತ ಗಂಡ ಚಿಕಿತ್ಸೆಯನ್ನು ಕೊಡಿಸಿದ್ದ. ಆದ್ರೆ ವಿಧಿಯಾಟ ಸದ್ಯ ತಾಯಿ-ಮಗಳ ಸಾವಿಂದ ಇಡೀ ಕುಟುಂಬ ಕಂಗೆಟ್ಟಿದೆ. ಈ ಬಗ್ಗೆ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
04/02/2022 07:29 am