ದಾವಣಗೆರೆ: ನಗರದ ಕುಂದುವಾಡ ಬಳಿಯ ಮಹಾಲಕ್ಷ್ಮೀ ಲೇ ಔಟ್ ನಲ್ಲಿ ಯುವಕನ ಕೊಲೆ ಪ್ರಕರಣ ಬೇಧಿಸಿರುವ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಹರಿಹರದ ಎಂ. ಮೆಹಬೂಬ್ ಪಾಷಾ ಅವರ ಪುತ್ರ ಮಹಮ್ಮದ್ ಅಲ್ತಾಫ್ ಕೊಲೆಗೀಡಾದಾತ. ಇನ್ನು ಪಾಷಾ ಅವರ ಪತ್ನಿಯ ಅಕ್ಕನ ಮಗ ಇಬ್ರಾಹಿಂ ಹತ್ಯೆ ಮಾಡಿದ ಆರೋಪಿ. ಕುಂದುವಾಡ ಸಮೀಪದ ಮಹಾಲಕ್ಷ್ಮೀ ಲೇಔಟ್ ನಲ್ಲಿ ಕತ್ತು ಸೀಳಿ ಅಲ್ತಾಫ್ ನ ಹತ್ಯೆ ಮಾಡಿ ಆರೋಪಿ ಬೈಕ್ ಸಮೇತ ಪರಾರಿಯಾಗಿದ್ದ.
ಮಾರ್ಚ್ ತಿಂಗಳಿನಲ್ಲಿ ಇಬ್ರಾಹಿಂ ಮದುವೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಟ್ಟೆ ತರಲು ಬೈಕ್ ನಲ್ಲಿ ಅಲ್ತಾಫ್ ನ ಜೊತೆ ಇಬ್ರಾಹಿಂ ದಾವಣಗೆರೆಗೆ ಬಂದಿದ್ದ. ಜನವರಿ 18ರಂದು ಹರಿಹರದಿಂದ ದಾವಣಗೆರೆಗೆ
ಇಬ್ಬರು ಬಂದಿದ್ದರು. ಆದ್ರೆ, ಇಬ್ಬರೂ ಮನೆಗೆ ಹೋಗಿರಲಿಲ್ಲ. ಎಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಆದ್ರೆ, ಮಾರನೇ ದಿನ ಕುಂದುವಾಡ ಸಮೀಪದ ಕೆರೆಯ ಮಹಾಲಕ್ಷ್ಮೀ ಬಡಾವಣೆಯ ಬಳಿ ಅಲ್ತಾಫ್ ನ ಕತ್ತು ಸೀಳಿ ಕೊಲೆಗೈದಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆ ಬಳಿಕ ಇಬ್ರಾಹಿಂ ನಾಪತ್ತೆಯಾಗಿದ್ದ. ಬೈಕ್ ನಲ್ಲಿ ಜೊತೆಗೆ ಬಂದಿದ್ದರೂ ಅಲ್ತಾಫ್ ಕೊಲೆಗೀಡಾಗಿದ್ದರೂ ಇಬ್ರಾಹಿಂ ಎಲ್ಲಿ ಹೋದ ಎಂಬ ಪ್ರಶ್ನೆ ಕಾಡಿತ್ತು. ಈತನೇ ಹತ್ಯೆ ಮಾಡಿರಬಹುದು ಎಂಬ ಶಂಕೆ ಪೊಲೀಸರಿಗೆ ಬಂದಿತ್ತು.
ಬಳಿಕ ಆರೋಪಿ ಇಬ್ರಾಹಿಂನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ತಿಳಿಸಿದ್ದಾರೆ.
ಇನ್ನು ತನ್ನೊಂದಿಗೆ ನಿಶ್ಚಯವಾಗಿದ್ದ ಯುವತಿ ಜೊತೆಗೆ ಅಲ್ತಾಫ್ ಸ್ವಲ್ಪ ಸಲುಗೆಯಿಂದಲೇ ಇದ್ದ. ಆಕೆಯೊಂದಿಗೆ ಈತನಿಗೆ ಸಂಪರ್ಕ ಇದೆ ಎಂಬ ಅನುಮಾನ ಇಬ್ರಾಹಿಂನನ್ನು ಕಾಡಲಾರಂಭಿಸಿತ್ತು. ಹೀಗಾಗಿ, ತನ್ನ ಚಿಕ್ಕಮ್ಮನ ಮಗ ಅಲ್ತಾಫ್ ನನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಆದ್ರೆ, ಪೊಲೀಸರು ಹೇಳುವ ಪ್ರಕಾರ ಅಲ್ತಾಫ್ ಹಾಗೂ ಯುವತಿಗೆ ಯಾವ ರೀತಿಯ ಸಂಪರ್ಕ ಇರಲಿಲ್ಲ ಎಂದು ಗೊತ್ತಾಗಿದೆ.
PublicNext
28/01/2022 04:03 pm