ನವದೆಹಲಿ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ತ ಯುವತಿಗೆ ಚಪ್ಪಲಿ ಹಾರ ಹಾಕಿದ ಸ್ಥಳೀಯ ಮಹಿಳೆಯರು ಆಕೆಯ ಮೆರವಣಿಗೆ ಮಾಡಿದ್ದಾರೆ.
ಈ ಅತಿ ಅಮಾನುಷ ಕೃತ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನವೇ ನಡೆದಿದೆ. ಸದ್ಯ ಅದರ ವಿಡಿಯೋ ವೈರಲ್ ಆಗಿದ್ದು ನಾಗರಿಕ ಸಮಾಜದಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅತ್ಯಾಚಾರ ಸಂತ್ರಸ್ತೆಯ ತಲೆ ಬೋಳಿಸಿ, ಮುಖಕ್ಕೆ ಮಸಿ ಬಳಿದು, ಕೊರಳಲ್ಲಿ ಚಪ್ಪಲಿ ಹಾರವನ್ನೂ ಹಾಕಿದ್ದಾರೆ. ನಂತರ ಆಕೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಮೆರವಣಿಗೆ ಮಾಡಿ ಘೋರಾತಿಘೋರ ವಿಕೃತಿ ತೋರಿದ್ದಾರೆ. ಈ ಪ್ರಕರಣವನ್ನು ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು ವಿಡಿಯೋದಲ್ಲಿ ಇರುವ ನಾಲ್ವರು ಮಹಿಳೆಯರನ್ನು ಬಂಧಿಸಿದ್ದಾರೆ.
20 ವರ್ಷ ವಯಸ್ಸಿನ ಈ ಯುವತಿ ಮೇಲೆ ಅಕ್ರಮ ಮದ್ಯ ಮಾರಾಟಗಾರರು ಇತ್ತೀಚೆಗೆ ಅತ್ಯಾಚಾರ ಎಸಗಿದ್ದರು. ಇದರಿಂದ ಘಾಸಿಗೊಂಡಿದ್ದ ಯುವತಿ ತನ್ನ ಮೇಲೆ ಮಹಿಳೆಯರೇ ತೋರಿದ ಈ ವಿಕೃತಿಯಿಂದ ಮತ್ತಷ್ಟು ಮಾನಸಿಕ ಆಘಾತಕ್ಕೊಳಗಾಗಿದ್ದಾಳೆ.
PublicNext
27/01/2022 07:49 pm