ತೆಲಂಗಾಣ: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಅಮೀನ್‌ಪುರದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಶ್ರೀಕಾಂತ್ ಗೌಡ ಹಾಗೂ ಇಡೀ ಕುಟುಂಬದ ಸಾವಿನ ರಹಸ್ಯ ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಇದು ಪೊಲೀಸರಿಗೆ ತಲೆ ಬಿಸಿ ಮಾಡಿದೆ.
ಆತ್ಮಹತ್ಯೆಗೂ ಮುನ್ನ ಶ್ರೀಕಾಂತ್ ಗೌಡ್ ತನ್ನ ಫೋನ್ ಹಾಗೂ ಪತ್ನಿ ಅನಾಮಿಕ ಅವರ ಫೋನ್‌ಗಳನ್ನು ಸಂಪೂರ್ಣವಾಗಿ ಫಾರ್ಮ್ಯಾಟ್ ಮಾಡಿರುವ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೇ ಲ್ಯಾಪ್‌ಟಾಪ್‌ನಲ್ಲಿದ್ದ ಮಾಹಿತಿಯನ್ನು ಸಂಪೂರ್ಣವಾಗಿ ಅಳಿಸಿ ಹಾಕಿದ್ದಾರೆ. ಜೊತೆಗೆ ಇಂಟರ್ನೆಟ್‌ನಲ್ಲಿ ಗೂಗಲ್ ಹುಡುಕಾಟದ ಹಿಸ್ಟರಿಯನ್ನೂ ಸಹ ಅಳಿಸಿದ್ದಾರೆ.
ಒಂದೇ ಒಂದು ಸಾಕ್ಷಿ ಸಹ ಸಿಗಬಾರದೆಂಬ ಕಾರಣಕ್ಕೆ ಫೋನ್‌ನಿಂದ ಸಿಮ್ ಕಾರ್ಡ್ ತೆಗೆದು ಯಾರಿಗೂ ಸಿಗದಂತೆ ಎಸೆದಿದ್ದಾರೆ. ಫೋನ್‌ಗಳಲ್ಲಿ ಡೇಟಾ ಇಲ್ಲದಿರುವುದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮುಜುಗರವಾಗಿ ಪರಿಣಮಿಸಿದೆ. ತಜ್ಞರ ಸಹಯೋಗದಲ್ಲಿ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಮುಂದುವರೆದಿದೆ.
PublicNext
22/01/2022 06:29 pm