ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರು ಗ್ರಾಮದ ಕಾಲುವೆ ಬಳಿ ಹೆಣ್ಣು ಶಿಶು ಪತ್ತೆಯಾಗಿದೆ. ಹೆಣ್ಣು ಮಗು ಬೇಡವೆಂದೋ ಅಥವಾ ಅನೈತಿಕ ಸಂಬಂಧದಿಂದ ಜನಿಸಿದ ಕಾರಣದಿಂದಲೋ ತಾಯಿ ಶಿಶುವನ್ನು ಬಿಟ್ಟು ಹೋಗಿದ್ದಾರೆ.
ಇನ್ನು ಮಗು ಜನಿಸುತ್ತಿದ್ದಂತೆ ಒಂದು ಬಟ್ಟೆಯಲ್ಲಿ ಸುತ್ತಿ ಕಾಲುವೆ ಬಳಿ ಎಸೆದು ಹೋಗಲಾಗಿದೆ. ಕಾಲುವೆ ಬಳಿ ಮಗುವಿನ ರೋಧನ ಕೇಳಿದ ಸ್ಥಳೀಯ ವ್ಯಕ್ತಿ ಶಿವಣ್ಣ ಪಡಶೆಟ್ಟಿ ಅಲ್ಲಿಗೆ ಹೋಗಿ ನೋಡಿದಾಗ ಮಗು ಇರುವುದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ತಾಯಿ ಪತ್ತೆಗೆ ತಾಳಿಕೋಟೆ ಪೊಲೀಸರು ಮುಂದಾಗಿದ್ದಾರೆ.
PublicNext
21/01/2022 05:25 pm