ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅತ್ಯಾಪ್ತನಿಂದ ಯುವತಿಯೊಬ್ಬಳಿಗೆ ಮೋಸವಾಗಿರುವ ಆರೋಪ ಕೇಳಿ ಬಂದಿದೆ. ಮದುವೆ ದಿನವೇ ಯುವತಿಗೆ ಕೈಕೊಟ್ಟು ಹೋಗಿದ್ದಾನೆ. ಹಳದಿ, ಮೆಹಂದಿ ದಿನ ಎಸ್ಕೇಪ್ ಆಗಿದ್ದಾನೆ.
ಸಂತ್ರಸ್ತ ಮಹಿಳೆಯು ಪತ್ರಕರ್ತೆಯಾಗಿದ್ದು, ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದಳು. ಬಳಿಕ ಶಾಸಕ ಜಮೀರ್ ಅಹ್ಮದ್ ಖಾನ್ ಅತ್ಯಾಪ್ತ ಮಿಸ್ಬಾ ಮುಖರಮ್ ಜೊತೆಗೆ ಕಳೆ ಐದು ವರ್ಷಗಳಿಂದ ಲಿವಿಂಗ್ ಟು ಗೆದರ್ ನಲ್ಲಿದ್ದಳು.
ಮಿಸ್ಬಾ ಮುಖರಮ್, ಯುವತಿಯಿಂದ 50 ಲಕ್ಷ ರೂ. ಪಡೆದು ಮೋಸ ಮಾಡಿದ್ದಾನೆ. ಯುವತಿಗೆ ಮೋಸ ಮಾಡಿದ್ದಾನೆಂದು ಕೋರ್ಟ್ ಕೂಡ ಫತ್ವಾ ಕೊಟ್ಟಿತ್ತು. ಯುವತಿ ದೂರು ಕೊಟ್ಟಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸ್ ಠಾಣೆಯಲ್ಲೂ ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಹೈಡ್ರಾಮಾ ಮಾಡಿದ್ದಾನೆ. ಬೇಲ್‌ನಿಂದ ಹೊರಬಂದ ಬಳಿಕ ಯುವತಿಗೆ ಜೀವ ಬೆದರಿಕೆ ಹಾಕಿದ್ದಾನೆ. ಸದ್ಯ ಸಂತ್ರಸ್ತ ಮಹಿಳೆ ಮುಸ್ಲಿಂ ಮುಖಂಡರ ನಡೆಯಿಂದ ಬೇಸತ್ತು ಪೊಲೀಸರ ಮೊರೆ ಹೋಗಿದ್ದಾರೆ.
PublicNext
19/01/2022 07:56 pm