ಯಾದಗಿರಿ: ಕೊಟ್ಟ ಹಣವನ್ನು ವಾಪಸ್ ನೀಡದೇ ಸ್ನೇಹಿತ ಮೋಸ ಮಾಡಿದ್ದಾನೆಂದು ಮನನೊಂದ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಹೆಡಗಿಮುದ್ರಾ ಗ್ರಾಮದಲ್ಲಿ ನಡೆದಿದೆ.
ಆಂಧ್ರ ಪ್ರದೇಶ ಮೂಲದ ರಾಮ ಮೋಹನ್ (55) ಆತ್ಮಹತ್ಯೆ ಮಾಡಿಕೊಂಡ ರೈತ. ರಾಮ ಮೋಹನ್ ಇತ್ತೀಚೆಗೆ ತನ್ನ ಸ್ನೇಹಿತ ರಮೇಶ್ ಎಂಬುವವರಿಗೆ 4.5 ಲಕ್ಷ ರೂ.ವನ್ನು ಕೊಟ್ಟಿದ್ದರಂತೆ. ಈ ಹಣವನ್ನು ವಾಪಸ್ ಕೇಳಿದರೆ ಕೊಡದೆ ಸ್ನೇಹಿತ ಸತಾಯಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ರೈತ ಡೆತ್ನೋಟ್ ಬರೆದಿಟ್ಟು ಜಮೀನಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
PublicNext
17/01/2022 07:58 pm