ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲು ಬರುತ್ತಿದ್ದಾಗಲೇ ಹಳಿಯ ಮೇಲೆ ಮಹಿಳೆಯನ್ನ ತಳ್ಳಿದ ಪಾಪಿ ಅರೆಸ್ಟ್

ಬ್ರಸೆಲ್ಸ್‌: ರೈಲು ಬರುತ್ತಿದ್ದಾಗಲೇ ಹಳಿಗಳ ಮೇಲೆ ಮಹಿಳೆಯನ್ನು ತಳ್ಳಿದ ಪಾಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರು ತಮ್ಮ ರೈಲಿಗಾಗಿ ಕಾಯುತ್ತಿರುತ್ತಾರೆ. ಈ ವೇಳೆ ರೈಲು ಸಮೀಪಿಸುತ್ತಿದ್ದಾಗ ವ್ಯಕ್ತಿಯೋರ್ವ ಮಹಿಳೆಯನ್ನು ಹಳಿಯ ಮೇಲೆ ತಳ್ಳುತ್ತಾನೆ. ಅದೃಷ್ಟವಶಾತ್ ರೈಲು ಮಹಿಳೆಯ ಬಳಿಯೇ ಬಂದು ನಿಲ್ಲುತ್ತದೆ. ಇದರಿಂದಾಗಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Edited By : Manjunath H D
PublicNext

PublicNext

17/01/2022 04:32 pm

Cinque Terre

67.54 K

Cinque Terre

1