ಕಲಬುರಗಿ: ರಕ್ತಸಿಕ್ತವಾಗಿ ಬರ್ಬರವಾಗಿ ಹತ್ಯೆಯಾಗಿ ಬಿದ್ದಿರುವ ಗೃಹಿಣಿ.. ಶವಗಾರದ ಬಳಿ ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ.. ಮತ್ತೊಂದೆಡೆ ಪೊಲೀಸರಿಂದ ಸ್ಪಾಟ್ ಇನ್ವೆಸ್ಟಿಗೇಷನ್.. ಅಷ್ಟಕ್ಕೂ ಈ ಭೀಕರ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ನಗರದ ರಿಂಗ್ ರಸ್ತೆಯ ಓಝಾ ಲೇಔಟ್ ನಲ್ಲಿ.
ಈ ಫೋಟೊದಲ್ಲಿ ಕಾಣ್ತಾಯಿರೋ ಪತಿ ತಾರಾಸಿಂಗ್ ಮತ್ತು ಪತ್ನಿ ಆರತಿ.. ಕಳೆದ ಹತ್ತು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಇಬ್ಬರಿಗೆ ಮೂವರು ಮುದ್ದಾದ ಮಕ್ಕಳಿದ್ದರು. ಇತ್ತಿಚೆಗೆ ಈ ದಂಪತಿಗಳ ಮಧ್ಯೆ ಜಗಳ ಶುರುವಾಗಿದೆ. ನಿತ್ಯ ಕುಡಿದು ಬಂದು ಪತಿ ತಾರಾಸಿಂಗ್ ಪತ್ನಿಗೆ ಹೊಡೆಯುತ್ತಿದ್ದ. ಕೆಲ ದಿನಗಳ ಹಿಂದಷ್ಟೆ ನಮಗೆ ಇರೋಕೆ ಸ್ವತಃ ಮನೆ ಬೇಕು ನಿಮ್ಮಪ್ಪನಿಗೆ ಮನೆ ಕೊಡಿಸೊಕೆ ಹೇಳು ಅಂತಾ ಕಿರುಕುಳ ಕೊಡುತ್ತಿದ್ದ. ಅಳಿಯನ ಕಿರುಕುಳಕ್ಕೆ ಬೇಸತ್ತ ಮಾವ, ಹೌಸಿಂಗ್ ಬೋರ್ಡ್ ನಲ್ಲಿ ಐದುವರೆ ಲಕ್ಷ ರೂಪಾಯಿ ಮೌಲ್ಯದ ಮನೆ ಕೊಡಿಸಿದ್ದ.
ಆದರೆ ಕಳೆದ ರಾತ್ರಿ ಸಂಕ್ರಾಂತಿ ಹಬ್ಬಕ್ಕೆಂದು ತವರಿಗೆ ಹೋಗಲು ರೆಡಿಯಾಗಿದ್ದ ಆರತಿಯೊಂದಿಗೆ ಕುಡಿದುಬಂದು ಜಗಳ ತೆಗೆದಿದ್ದಾನೆ.
ಮನೆ ಕೊಟ್ರೆ ಸಾಲದು.. ಮನೆ ನನ್ನ ಹೆಸರಿಗೆ ಬರೆದುಕೊಡೊಕೆ ಹೇಳು ಅಂತಾ ಥಳಿಸಿದ್ದಾನೆ. ಈ ವೇಳೆ ತಾಳ್ಮೆ ಕಳೆದುಕೊಂಡು ಪತ್ನಿ ತಲೆ ಮೇಲೆ ಸಿಲಿಂಡರ್ ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಇನ್ನೂ ಪತಿ ತಾರಾಸಿಂಗ್ ನಗರದ ಖಾಸಗಿ ಶಾಲೆಯೊಂದರಲ್ಲಿ ವಾಹನ ಚಾಲಕನಾಗಿ ಕೆಲದ ಮಾಡುತ್ತಿದ್ದ ಎನ್ನಲಾಗಿದೆ..
ಇನ್ನೂ ಮಗಳನ್ನ ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಆರೋಪಿ ಅಳಿಯನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಕುರಿತು ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.
ಅದೆನೇ ಇರಲಿ ಇಂದು ಎಲ್ಲಡೆ ಸಡಗರ ಸಂಭ್ರಮದ ಮಧ್ಯೆ ಸಂಕ್ರಾಂತಿ ಹಬ್ಬವನ್ನ ಆಚರಿಸಲಾಗುತ್ತಿದೆ. ಹಬ್ಬದ ದಿನದಂದು ತವರಿಗೆ ಹೋಗಲು ರೆಡಿಯಾಗಿದ್ದ ಆರತಿ ಮಾತ್ರ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.
PublicNext
14/01/2022 06:00 pm