ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗುವಿಗೆ ವಿಷ ಉಣಿಸಿ ಕುಣಿಕೆಗೆ ಕೊರಳೊಡ್ಡಿದ ದಂಪತಿ

ಮಂಡ್ಯ : ಹಾಲುಗಲ್ಲದ ಮಗುವಿಗೆ ವಿಷ ಉಣಿಸಿ ದಂಪತಿ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ನಾಗಮಂಗಲ ತಾಲೂಕಿನ ಗಂಗಾವಾಡಿ ಗ್ರಾಮದಲ್ಲಿ ನಡೆದಿದೆ. ರಘು(28), ತನುಶ್ರೀ(24) ಮತ್ತು ಸಿರಿ 1 ವರ್ಷದ ಹೆಣ್ಣು ಮಗು ಸಾವನ್ನಪ್ಪಿದ ದುರ್ದೈವಿಗಳು.

ಮಂಡ್ಯ ನಗರದ ರಘು ಜತೆ 3 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ತನುಶ್ರೀ ಕಳೆದ 8 ದಿನದ ಹಿಂದೆ ತನುಶ್ರೀ ಗಂಡ ಹಾಗೂ ಮಗುವಿನ ಜತೆ ಗಂಗಾವಾಡಿ ಗ್ರಾಮದ ತಂದೆ ಮನೆಗೆ ಬಂದಿದ್ದರು. ಇನ್ನು ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟ ಇವರು ನಮ್ಮ ಆತ್ಮಹತ್ಯೆಗೆ ಯಾರು ಕಾಣರಲ್ಲ, ನಮ್ಮ ಸಾವಿಗೆ ನಾವೇ ಕಾರಣ ಎಂದು ಬರೆದಿದ್ದಾರೆ.

ಸದ್ಯ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nirmala Aralikatti
PublicNext

PublicNext

11/01/2022 10:08 pm

Cinque Terre

108.71 K

Cinque Terre

2