ಬೆಂಗಳೂರು: ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಪಾತಕಿ ವೆಂಕಟೇಶ@ಒಂಟಿ ಕೈ ವೆಂಕಟೇಶ್ ನನ್ನ ಸಿದ್ದಾಪುರ ಪೊಲೀಸರು ಗುಂಡಾಕಾಯ್ದೆಯಡಿ ಅರೆಸ್ಟ್ ಮಾಡಿದ್ದಾರೆ.
ಲಾ ಅಂಡ್ ಆರ್ಡರ್ ಗೆ ಸಮಸ್ಯೆಯಾಗಿದ್ದ ರೌಡಿಶೀಟರ್ ವೆಂಕಟೇಶ್ @ ಒಂಟಿ ಕೈ ವೆಂಕಟೇಶ್ ಕೊಲೆ, ಕೊಲೆಯತ್ನ, ಸುಲಿಗೆ ಹಾಗೂ ಜೀವಬೆದರಿಕೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಬಂಧಿತನ ವಿರುದ್ಧ ಸಿದ್ದಾಪುರ ಹಾಗೂ ಕೋರಮಂಗಲ ಪೊಲೀಸ್ ಠಾಣೆಯಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳಿವೆ.ಹಲವು ಬಾರಿ ಜೈಲಿಗೆ ಹೋಗಿಬಂದ್ರೂ ಮತ್ತೆ ಏರಿಯಾದಲ್ಲಿ ಕ್ರೈಂ ಆಕ್ಟಿವಿಟಿಯಲ್ಲಿ ಒಂಟಿ ಕೈ ವೆಂಕಟೇಶ್ ಇನ್ವಾಲ್ವ್ ಆಗಿದ್ದ.
ವಿಚಾರಣೆಗೆ ಹಾಜರಾಗುವಂತೆ ವಾರೆಂಟ್ ಹೊರಡಿಸಿದರೂ ಆರೋಪಿ ಒಂಟಿ ಕೈ ವೆಂಕಟೇಶ್ ಹಾಜರಾಗುತ್ತಿರಲಿಲ್ಲ. ತನ್ನ ವಿರುದ್ಧ ಸಾಕ್ಷಿ ಹೇಳುವವರಿಗೂ ಜೀವ ಬೆದರಿಕೆ ಹಾಕುತ್ತಿದ್ದ. ಈ ಮೂಲಕ ಸಮಾಜಕ್ಕೆ ಕಂಟಕನಾಗಿದ್ದ ವೆಂಕಟೇಶ್ ನನ್ನ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿದೆ. ಇನ್ನು ಈ ಕಾಯ್ದೆಯಡಿ ಬಂಧಿತನಾಗಿರೋ ವೆಂಕಟೇಶ್‌ಗೆ ಒಂದು ವರ್ಷದವರೆಗೂ ಜಾಮೀನು ಸಿಗುವುದಿಲ್ಲ.
PublicNext
10/01/2022 03:56 pm