ರಾಯಚೂರು: ನೂತನ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳದ ಪುಂಡರು ಶಾಲೆಯ ಬೀಗ ಮುರಿದು ಗುಂಡು-ತುಂಡು ಪಾರ್ಟಿ ಮಾಡಿ, ವಿಕೃತಿ ಮೆರೆದ ಘಟನೆ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯ ಬೀಗ ಮುರಿದು ಎಂಟ್ರಿಕೊಟ್ಟ ದುರುಳರು ಶಾಲಾ ದಾಖಲಾತಿಗಳನ್ನೇಲ್ಲಾ ಚಲ್ಲಾಪಿಲ್ಲಿ ಮಾಡಿ,ಅಡುಗೆ ಕೋಣೆಯಲ್ಲಿ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ ಅಡುಗೆ ಎಣ್ಣೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಎಗರಿಸಿ ಎಸ್ಕೇಪ್ ಆಗಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದ ಪುಂಡರು, ಶಾಲಾ ದಾಖಲಾತಿಗಳ ಮೇಲೆ ಮದ್ಯದ ಪೌಚ್ ಇಟ್ಟು ಶಾಲೆಯ ಆವರಣದಲ್ಲಿ ಮದ್ಯದ ಬಾಟಲ್ ಗಳು, ಮಾಂಸದ ತುಂಡುಗಳನ್ನ ಇಟ್ಟು ಅಟ್ಟಹಾಸಗೈದಿದ್ದಾರೆ.
ಸದ್ಯ ಶಾಲೆಯಲ್ಲಿ ಅವಸ್ಥೆ ಕಂಡು ಬೆಚ್ಚಿ ಬಿದ್ದ ಮುಖ್ಯಗುರುಗಳು ಮಾನ್ವಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
PublicNext
01/01/2022 12:21 pm