ಕೊಚ್ಚಿ:ಇಲ್ಲೊಂದು ಭೀಕರ ಹತ್ಯೆ ನಡೆದಿದೆ. ಇಲ್ಲಿ ಆರೋಪಿ ಬೇರೆ ಯಾರೋ ಅಲ್ಲ.ಸ್ವತಃ ಸಹೋದರಿನೇ ಆಗಿದ್ದಾಳೆ. ಅಕ್ಕನನ್ನ ಕೊಂಡು ಪರಾರಿ ಆಗಿದ್ದ ಈಕೆ ಪೊಲೀಸರ ಕೈಗೆ ಸಿಕ್ಕಬಳಿಕವೇ ಅಸಲಿ ಸತ್ಯ ಹೊರ ಬಿದ್ದಿ. ಏನ್ ಅದು ಅಂತಿರೋ. ಬನ್ನಿ, ಹೇಳ್ತೀವಿ.
ಕೊಚ್ಚಿಯ ಉತ್ತರ ಪುರವುರ್‌ನ ಪೆರುವರಂನ ಮನೆಯಲ್ಲಿ 25 ವರ್ಷದ ಯುವತಿಯ ಶವ ಸುಟ್ಟ ಸ್ಥಿತಿಯಲ್ಲಿ ಸಿಕ್ಕಿತ್ತು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಇದು ಮೃತದ ದೇಹದ ಮೇಲಿದ್ದ ಲಾಕೆಟ್ ಮತ್ತು ಬಟ್ಟೆ ಮೇಲೆನೆ ಈಕೆ ವಿಸ್ಮಯ ಅಲಿಯಾಸ ಸಿಂಚು ಅಂತಲೇ ಪತ್ತೆ ಹಚ್ಚಿದ್ದಾರೆ.
ಆದರೆ ಕೊಲೆಗೆ ಕಾರಣ ಯಾರೂ ಅನ್ನೋದನ್ನ ಬೆನ್ನಟ್ಟಿದ ಪೊಲೀಸರಿಗೆ ಸಿಸಿಟಿವಿ ದೃಶ್ಯದಲ್ಲಿ ಒಂದು ಸತ್ಯ ಪತ್ತೆ ಆಗಿದೆ. ಹಿತ್ತಲು ಬಾಗಿಲಿನಿಂದಲೇ ಯುವತಿ ಓಡಿ ಹೋಗಿರೋದು ತಿಳಿದಿದೆ. ಆಕೆಯನ್ನ ಬಂಧಿಸಿದ ಬಳಿಕವೇ ಇಡೀ ಪ್ರಕರಣದ ಅಸಲಿ ಸತ್ಯ ಗೊತ್ತಾಗಿದೆ.
ಹಾಗೆ ಹಿಂಬಾಗಿಲಿನಿಂದ ಓಡಿದ ಹೋರಿಗೋ ಸಿಂಚು ಸಹೋದರಿ 22 ರ ಜೀತು. ಈಕೆ ಮಾನಸಿಕ ಸಮಸ್ಯೆಯಿಂದಲೇ ಬಳಲುತ್ತಿದ್ದಾಳೆ. ಅಕ್ಕನ ಜೊತೆಗೆ ಆಗಾಗ ಜಗಳ ಕೂಡ ಆಡುತ್ತಿದ್ದಳು. ಆ ಜಗಳವೇ ಅಕ್ಕನ ಕೊಲ್ಲೋಮಟ್ಟಿಗೆ ಹೋಗಿದೆ ಅಂತಲೇ ಹೇಳಲಾಗುತ್ತಿದೆ. ಆದರೂ ಪೊಲೀಸರು ಅಸಲಿ ಕಾರಣ ತಿಳಿಯಲು ತನಿಖೆ ಮುಂದುವರೆಸಿದ್ದಾರೆ.
PublicNext
31/12/2021 12:55 pm