ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೇಲಧಿಕಾರಿಗಳ ಕಿರುಕುಳಕ್ಕೆ ಯೋಧನ ಆತ್ಮಹತ್ಯೆ

ವಿಜಯಪುರ:ಭಾರತೀಯ ಸೇನೆಯ ಯೋಧ ಮೇಲಧಿಕಾರಿಗಳ ಕಿರುಕುಳಕ್ಕೆ ಹೊಲದ ಮರವೊಂದಕ್ಎ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುದ್ದೇಬಿಹಾಳ ಗ್ರಾಮದಲ್ಲಿ ನಡೆದಿದೆ.

ಹನುಮಂತ್ರಾಯಪ್ಪ ಹೂಗಾರ (30) ಎಂಬ ಯೋಧನೆ ಈಗ ಆತ್ಮಹತ್ಯೆ ಮಾಡಿಕೊಂಡ ಯೋಧ. ಕಳೆದ 10 ವರ್ಷದಿಂದಲೇ ಭಾರತೀಯ ಸೇನೆಯಲ್ಲಿ ಜನರಲ್ ಡ್ಯೂಟಿ ಸೋಲ್ಜರ್ ಆಗಿಯೇ ಕೆಲಸ ಮಾಡುತ್ತಿದ್ದು, ಮೇಲಧಿಕಾರಿಗಳ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಎರಡು ದಿನದ ಹಿಂದೆಷ್ಟೆ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮಕ್ಕೆ ರಜೆ ಮೇಲೆ ಬಂದಿದ್ದ,ಆದರೆ ಮೇಲಧಿಕಾರಿಗಳ ಕಿರುಕುಳಕ್ಕೆ ಮನನೊಂದಿದ್ದ ಅಂತಲೂ ಕುಟುಂಬದವರು ದೂರಿದ್ದಾರೆ.ಮಗನ ಆತ್ಮಹತ್ಯೆ ವಿಷಯವನ್ನ ತಂದೆ ಶಿವಪ್ಪ ಹೂಗಾರ ಪೊಲೀಸರಿಗೆ ತಿಳಿಸಿದ್ದಾರೆ.ಪ್ರಕರಣವೂ ದಾಖಲಾಗಿದೆ.

Edited By :
PublicNext

PublicNext

31/12/2021 07:21 am

Cinque Terre

73.27 K

Cinque Terre

7

ಸಂಬಂಧಿತ ಸುದ್ದಿ