ಬೆಳಗಾವಿ: ಇತ್ತಿಚೆಗೆ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಸದ್ಯ ಹೈಕೋರ್ಟ್ ಬೆಳಗಾವಿ ಪೊಲೀಸ್ ಒಬ್ಬರ ಕಿವಿಹಿಂಡುವ ಮೂಲಕ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದೆ.
ಹೌದು 22 ವರ್ಷದ ತಾಯಿ ಹಾಗೂ ಮೂರು ವರ್ಷದ ಹೆಣ್ಣು ಮಗುವನ್ನು ಐದು ತಿಂಗಳ ಕಾಲ ವೇಶ್ಯಾವಾಟಿಕೆಗಾಗಿ ಮಾನವ ಕಳ್ಳ ಸಾಗಣೆ ಸಂತ್ರಸ್ತರ ಪುನರ್ವಸತಿ ಕೇಂದ್ರದಲ್ಲಿ ಅಕ್ರಮವಾಗಿ ಇಟ್ಟು ನೈತಿಕ ಪೊಲೀಸ್ ಗಿರಿ ಪ್ರಯತ್ನಕ್ಕಾಗಿ ಮಾಳ್ ಮಾರುತಿ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್ ಬಾಳಸಾಹೇಬ್ ಪಾಟೀಲ್ ಗೆ ಹೈಕೋರ್ಟ್ 1 ಲಕ್ಷ ರೂ.
ದಂಡ ವಿಧಿಸಿದೆ.
ಬಿಡುಗಡೆ ಮಾಡುವಂತೆ ಪದೇ ಪದೇ ಮನವಿ ಮಾಡಿದರೂ ಅಕ್ರಮವಾಗಿ ತಾಯಿ ಮತ್ತು ಮಗುವನ್ನು ಹಿಡಿದಿಟ್ಟುಕೊಂಡಿರುವ ಕ್ರಮವು ತಾಯಿ ಮತ್ತು ಮಗಳ ಮನಸ್ಸು ಮತ್ತು ದೇಹ ಎರಡನ್ನೂ ಬಂಧಿಸುವ ಸ್ಪಷ್ಟ ಪ್ರಕರಣವಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಎನ್.ಎಸ್. ಎನ್ಎಸ್ ಸಂಜಯ್ ಗೌಡ, ಸಂತ್ರಸ್ತರ ಪುನರ್ವಸತಿ ಕೇಂದ್ರ ಕೂಡಾ 1 ಲಕ್ಷ ರೂ. ದಂಡ ಪಾವತಿಸುವಂತೆ ಸೂಚಿಸಿದ್ದಾರೆ.
ದೂರುದಾರರ ಮಗಳ ಹೆಸರಿನಲ್ಲಿ ರೂ. 2 ಲಕ್ಷ ರೂಪಾಯಿಯನ್ನು ಸ್ಥಿರ ಠೇವಣಿಯಾಗಿ ಇಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿರುವ ನ್ಯಾಯಾಲಯ, ಮಗಳು ಪ್ರೌಢವಸ್ಥೆಗೆ ಬರುವವರೆಗೂ ತಾಯಿ ಮೊತ್ತದ ಮೇಲಿನ ಬಡ್ಡಿಯನ್ನು ಪಡೆಯಬಹುದು ಎಂದು ಹೇಳಿದೆ.
ಅನ್ಯ ಉದ್ದೇಶಕ್ಕೆಂದೇ ಇರುವ ಪುನರ್ವಸತಿ ಕೇಂದ್ರದಲ್ಲಿ ಮಹಿಳೆ ಮತ್ತು ಮಗುವನ್ನು ಇರಿಸಿರುವ ಇನ್ಸ್ ಪೆಕ್ಟರ್ ಕ್ರಮ ಬಲವಂತದ ಬಂಧನದ ವಿರುದ್ಧ ಮಹಿಳೆ ಇನ್ಸ್ ಪೆಕ್ಟರ್ ಹಾಗೂ ಪುನವರ್ಸತಿ ಕೇಂದ್ರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಳು.
PublicNext
28/12/2021 07:23 am