ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಜಾಬ್ ಗಡಿಯಲ್ಲಿ 200 ಕೋಟಿ ಬೆಲೆಯ ಹೆರಾಯಿನ್ ವಶ

ಫಿರೋಜ್​​ಪುರ್: ಪಂಜಾಬ್‌ನ ಫಿರೋಜ್‌ಪುರ್​​ ಸೆಕ್ಟರ್‌ನ ಎರಡು ಕಡೆ ನಡೆದ ದಾಳಿ ವೇಳೆ 200 ಕೋಟಿ ಮೌಲ್ಯದ 40 ಕೆಜಿ ಹೆರಾಯಿನ್ಅನ್ನು ಗಡಿ ಭದ್ರತಾ ಪಡೆ (BSF) ವಶಕ್ಕೆ ಪಡೆದಿದೆ.

ಅದೇ ಪ್ರದೇಶದಲ್ಲಿ 10 ಕೆಜಿಗೂ ಹೆಚ್ಚು ವಸ್ತುವನ್ನು ವಶಪಡಿಸಿಕೊಂಡ ಕೇವಲ ಒಂದು ದಿನದ ಅಂತರದಲ್ಲಿ ಇಷ್ಟೊಂದು ಪ್ರಮಾಣದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಭಾನುವಾರದ ಮೊದಲ ಪ್ರಕರಣದಲ್ಲಿ, 101 ಬೆಟಾಲಿಯನ್‌ ಸೈನಿಕರು ಗಡಿ ಹೊರಠಾಣೆ ಮಿಯಾನ್ ವಾಲಿ ಉತ್ತರ ಬಳಿ 22 ಪ್ಯಾಕೆಟ್‌ಗಳಲ್ಲಿ ಬಚ್ಚಿಟ್ಟ 34 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 170 ಕೋಟಿ ರೂ. ಎಂದು ಅಂದಾಜಿಸಲಾಗಿಸಲಾಗಿದೆ.

ಎರಡನೇ ಪ್ರಕರಣದಲ್ಲಿ 116 ಬೆಟಾಲಿಯನ್‌ನ ಸಿಬ್ಬಂದಿ ಗಡಿ ಹೊರಠಾಣೆ ಮೊಹಮ್ಮದಿ ವಾಲಾ ಬಳಿ 30 ಕೋಟಿ ಮೌಲ್ಯದ 6 ಕೆಜಿ ತೂಕದ ಆರು ಪ್ಯಾಕೆಟ್ ಹೆರಾಯಿನ್ ಅನ್ನು ವಶಕ್ಕೆ ಪಡೆದಿದ್ದಾರೆ.

Edited By : Nagaraj Tulugeri
PublicNext

PublicNext

26/12/2021 09:21 pm

Cinque Terre

61.21 K

Cinque Terre

0