ಬೆಳಗಾವಿ: ನಿಧಿ ಆಸೆಗಾಗಿ ದೇವರ ಮೂರ್ತಿಗೆ ವಾಮಾಚಾರ ಮಾಡಿದ್ದೂ ಅಲ್ಲದೇ ಮೂರ್ತಿಯ ಬುಡಕ್ಕೆ ಹಾರೆ ಹಾಕಿ ಅಗೆದಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹೊನ್ನಿದಿಬ್ಬ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಿನ್ನೆ ಶನಿವಾರ ತಡರಾತ್ರಿ ನಡೆದಿದೆ
ದೇವಸ್ಥಾನ ಸುತ್ತಲೂ ನಿಂಬೆ ಹಣ್ಣು, ಕುಂಕುಮ, ರಂಗೋಲಿ ಸೇರಿದಂತೆ ವಾಮಾಚಾರದ ವಸ್ತುಗಳು ಪತ್ತೆಯಾಗಿವೆ. ಕಿತ್ತೂರು ಸಂಸ್ಥಾನದ ಕಾಲದ ಐತಿಹಾಸಿಕ ಹಿನ್ನೆಲೆ ಇರುವ ಹಳೆಯ ದೇವಸ್ಥಾನ ಇದಾಗಿದೆ.
ದೇವಸ್ಥಾನ ಪೂಜಾರಿ ಪೂಜೆ ಮಾಡಲು ತೆರಳಿದಾಗ ಕಿಡಿಗೇಡಿಗಳ ಈ ಕೃತ್ಯ ಕಂಡುಬಂದಿದೆ. ಸ್ಥಳಕ್ಕೆ ಕಿತ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
26/12/2021 07:53 pm