ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂತರ್ಜಾತಿ ಪ್ರೇಮ ವಿವಾಹ-ಬದುಕಲು ಬಿಡ್ತಿಲ್ಲ ರಕ್ಷಣೆ ಕೊಡಿ ಅಂತವ್ರೆ ದಂಪತಿ

ವಿಜಯನಗರ: ಅಂತರ್ಜಾತಿ ವಿವಾಹ ಮಾಡಿಕೊಂಡ ಪ್ರೇಮಿಗಳಿಬ್ಬರು ರಕ್ಷಣೆಗಾಗಿ ಪರದಾಡುತ್ತಿದ್ದಾರೆ. ಜೀವನ ನಡೆಸಲು ನಮ್ಮ ಮನೆಯವರೇ ನಮಗೆ ಬಿಡುತ್ತಿಲ್ಲ ಅಂತಲೇ ಪೊಲೀಸ್ ಠಾಣೆ ಮೆಟ್ಟಿಲ್ಲದೇರಿದ್ದಾರೆ.

ದಾವಣಗೆರೆಯಲ್ಲಿ ಎಂಜಿನಿಯಿಂಗ್ ಓದುವಾಗಲೇ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಯುವತಿ ಸೌಮ್ಯ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪಾವನಾಪುರದ ಯುವಕ ಕಿರಣ್ ಲವ್ ಮಾಡುತ್ತಿದ್ದರು. ಇವರ ಪ್ರೀತಿ ಮದುವೆ ಹಂತಕ್ಕೂ ತಲುಪಿತ್ತು. ಮನೆಯವರು ಒಪ್ಪದೇ ಇದ್ದಾಗ ಮನೆಯಿಂದ ಓಡಿ ಬಂದು ಮದುವೇನೂ ಆಗಿದ್ದರು.

ಆದರೆ ಈಗ ನಮ್ಮಮನೆಯವರೇ ನಮಗೆ ಬದುಕಲು ಬಿಡುತ್ತಿಲ್ಲ.ನೀವು ನಮಗೆ ರಕ್ಷಣೆ ಕೊಡಲೇಬೇಕು ಅಂತಲೇ ವಿಜಯನಗರ ಜಿಲ್ಲೆಯ ಎಸ್ಪಿ ಕಛೇರಿಗೆ ಬಂದು ಕೇಳಿಕೊಳ್ಳುತ್ತಿದ್ದಾರೆ.

ಶಿವಮೊಗ್ಗದ ಸೌಮ್ಯ ಮಿಸ್ ಆಗಿದ್ದಾಳೆ ಅಂತಲೇ ದಾವಣಗೆರೆಯ ವಿದ್ಯಾ ನಗರದಲ್ಲಿ ಕೇಸ್ ದಾಖಲಾಗಿದೆ.ಹಾಗೇನೆ ಈ ಸಂಬಂಧ ಎಸ್ಪಿ ಅರುನ್ ಕುಮಾರ್ ಮಾತನಾಡಿದ್ದಾರೆ. ಪ್ರೇಮಿಗಳಿಗೆ ರಕ್ಷಣೆ ಕೊಡಿ ಅಂತಲೂ ಸಿಬ್ಬಂದಿಗೆ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

Edited By : Shivu K
PublicNext

PublicNext

24/12/2021 04:11 pm

Cinque Terre

85.4 K

Cinque Terre

0