ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದ.ಕೋ.ಅಕ್ರಮ ಸಿನಿಮಾ ಸಿಡಿ ಮಾರಾಟ ನಿ‍ಷೇಧ-ಮಾರಿದ್ರೋ ಗಲ್ಲು ಗ್ಯಾರಂಟಿ

ಫ್ಯೂಂಗ್ಯಾಂಗ್: ದಕ್ಷಿಣ ಕೋರಿಯಾದಲ್ಲಿ ಸಿನಿಮಾ ಸಿಡಿಗಳನ್ನ ಅಕ್ರಮವಾಗಿ ಮಾರೋ ಹಾಗಿಲ್ಲ.ಹಾಗೇನಾದ್ರೂ ಮಾಡಿದ್ರೋ ಮುಗಿದೇ ಹೋಯಿತು. ಅವರಿಗೆ ಅಲ್ಲಿ ಗಲ್ಲು ಶಿಕ್ಷೆ ಗ್ಯಾರಂಟಿ. ಉತ್ತರ ಕೋರಿಯಾದ ಸುಪ್ರಿಂ ಲೀಡರ್ ಕಿಮ್ ಜಾಂಗ್ ಉನ್ ಅಧ್ಯಕ್ಷತೆಯಲ್ಲಿಯೇ ಈಗಾಗಲೇ 7 ಮಂದಿಗೆ ಗಲ್ಲು ಶಿಕ್ಷೆ ಆಗಿದೆ. ಅದು ಈಗ ಬೆಳಕಿಗೆ ಬಂದಿದೆ.

ಸುಪ್ರಿಂ ಲೀಡರ್ ಕಿಮ್ ಜಾಂಗ್ ಉನ್ ಅಧಕ್ಷೆತೆ ವಿಚಿತ್ರವಾಗಿಯೇ ಇದೆ. ಹೌದು ಇದನ್ನ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕಿಮ್ ಆಡಳಿತದಲ್ಲಿ ಎಲ್ಲವೂ ವಿಕೃತವಾಗಿಯೆ ಇವೆ.ಅದರಂತೆ ಮಾನವ ಹಕ್ಕುಗಳ ಸಂಘಟನೆ ಮತ್ತು ಪರಿವರ್ತನಾ ನ್ಯಾಯ ಕಾರ್ಯನಿರತರ ಗುಂಪು ಈಗೊಂದು ಸತ್ಯ ಬಯಲಿಗೆಳೆದಿದೆ.

ಹೌದು. ಉತ್ತರ ಕೋರಿಯಾ ತ್ಯಜಿಸಿ ಬಂದ 683 ಮಂದಿಯನ್ನ ಸಂದರ್ಶಿಸಿದೆ.ಇದರಿಂದ ತಿಳಿದು ಬಂದ ವಿಷಯ ಭಯಾಣಕವಾಗಿಯೇ ಇದೆ. ಡ್ರಗ್ಸ್-ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳ ಸಾಗಾಣಿಕೆಗೇನೆ ಇಲ್ಲಿಯ 27 ಜನಕ್ಕೆ ಮರಣ ದಂಡನೆ ಶಿಕ್ಷೆ ಆಗಿದೆ.

ದಕ್ಷಿಣ ಕೋರಿಯಾದಲ್ಲಿ ಆನ್ ಲೈನ್ ಪೇಪರ್ ನಡೆಸುತ್ತಿರೊ ವ್ಯಕ್ತಿ ಇನ್ನೂ ಒಂದು ಸತ್ಯ ಬಿಚ್ಚಿಟ್ಟಿದ್ದಾನೆ. ಇಲ್ಲಿ ಸಿನಿಮಾ ಮತ್ತು ಅದಕ್ಕೆ ಸಂಬಂಧಿಸಿದ ಸಿಡಿಗಳನ್ನ ಅಕ್ರಮವಾಗಿಯೇ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಸಾರ್ವಜನಿಕವಾಗಿಯೇ ಮರಣ ದಂಡನೆ ಶಿಕ್ಷೆ ನೀಡಲಾಗಿದೆ.

ಇದನ್ನ ತಿಳಿದ ಅಂತರಾಷ್ಟ್ರೀಯ ಸಮುದಾಯ ಉತ್ತರ ಕೋರಿಯಾದ ಮೇಲೆ ಒತ್ತಡ ಹಾಕಿ ಇಂತಹ ಮರಣ ದಂಡನೆಗಳನ್ನ ನಿಲ್ಲಿಸಿ ಅಂತಲೂ ಹೇಳಿದೆ. ಆದರೆ, ಸುಪ್ರಿಂ ಲೀಡರ್ ಕಿಮ್ ಜಾಂಗ್ ಉನ್ ಇತರ ಇಲ್ಲಿ ಏನೂ ನಡೆದೇ ಇಲ್ಲ ಅಂತ ಹೇಳಿ ಸುಮ್ಮನಾಗಿ ಬಿಟ್ಟಿದ್ದಾರೆ.

Edited By :
PublicNext

PublicNext

24/12/2021 08:12 am

Cinque Terre

55.28 K

Cinque Terre

12