ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆ ಇಲ್ಲದೆ ಮಗು : ಹುಟ್ಟಿದ ಕಂದನನ್ನು ಕೊಂದು ನಾಲಗೆ ಎಸೆದ ಪದವೀಧರೆ

ತಿರುವನಂತಪುರ: ಅವಳಿಗೆ ಎಷ್ಟು ಜ್ಞಾನವಿದ್ದರೇನು ದುಡುಕಿನಲ್ಲಿ ಮಾಡಿದ ಕೃತ್ಯಕ್ಕೆ ಯಾರುಹೊಣೆ. ಹೌದು ಎಂಕಾಂ ಪದವೀಧರೆಯೊಬ್ಬಳು ಅಕ್ರಮ ಸಂಬಂಧದಿಂದ ಮಗು ಪಡೆದು ಜನಿಸಿದ ಮಗುವನ್ನು ನೀರಿನಲ್ಲಿ ಮುಳುಗಿಸಿಕೊಂದು ಬಳಿಕ ನಾಲೆಗೆ ಎಸೆದ ಘಟನೆ ಹೀನ ಘಟನೆ ಕೇರಳದ ತ್ರಿಶೂರ್ನಲ್ಲಿ ನಡೆದಿದೆ.

ಸದ್ಯ ಮೇಘಾ (23), ಆಕೆಯ ಪ್ರಿಯಕರ ಮ್ಯಾನುಯೆಲ್ (25) ಮತ್ತು ಆತನ ಸ್ನೇಹಿತ ಅಮಲ್ ನನ್ನು (24) ಪೊಲೀಸರು ಬಂಧಿಸಿದ್ದಾರೆ.

ಮಗುವಿನ ಶವವನ್ನು ಗೋಣಿಚೀಲದಲ್ಲಿ ಹಾಕಿರುವುದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಕೃತ್ಯಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಶೀಲಿಸಿದ ಪೊಲೀಸರು ವರಾಯಿಡಂ ಮೂಲದ ಆರೋಪಿ ಮ್ಯಾನುಯೆಲ್ ಮತ್ತು ಆತನ ಸ್ನೇಹಿತ ಅಮಲ್ ಅನ್ನು ಪೊಲೀಸರು ಬಂಧಿಸಿ ವಿಚಾರಿಸಿದ್ದಾಗ ಸತ್ಯಾಂಶ ಬಯಲಾಗಿದೆ.

ಮೇಘಾ ಮತ್ತು ಮ್ಯಾನುಯೆಲ್ ಎರಡು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರಿಂದ ಮೇಘಾ ಗರ್ಭವತಿಯಾಗಿದ್ದಾಳೆ ಆದರೆ ಈ ವಿಷಯ ಮನೆಯವರಿಗೆ ತಿಳಿದಿರಲಿಲ್ಲ. ಗರ್ಭಪಾತ ಮಾಡಿಸಿಕೊಳ್ಳಲು ಸಾಧ್ಯವಾಗದ್ದರಿಂದ ಈ ಕೃತ್ಯ ಮಾಡಿದ್ದಾರೆ. ಮೇಘಾ ತ್ರಿಶೂರ್ ನ ಹಣಕಾಸು ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ಮ್ಯಾನುಯೆಲ್ ಪೇಂಟಿಂಗ್ ಕೆಲಸಗಾರನಾಗಿದ್ದಾನೆ.

Edited By : Nirmala Aralikatti
PublicNext

PublicNext

23/12/2021 09:25 pm

Cinque Terre

62.86 K

Cinque Terre

11