ಚಿತ್ರದುರ್ಗ: ಸ್ನಾನ ಮಾಡುತ್ತಿದ್ದ ರೌಡಿ ಶೀಟರ್ ವ್ಯಕ್ತಿಯನ್ನು ಅರೆಬೆತ್ತಲೆಯಲ್ಲಿ ಮೆರವಣಿಗೆ ಮೂಲಕ ಠಾಣೆಗೆ ಕರೆತಂದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ. ವೇಣುಗೋಪಾಲ್ ಎಂಬ ವ್ಯಕ್ತಿಯನ್ನು ಅರೆಬೆತ್ತಲೆ ಸ್ಥಿತಿಯಲ್ಲೇ ಪೊಲೀಸರು ಠಾಣೆಗೆ ಕರೆತಂದಿರುವ ಆರೋಪ ಕೇಳಿ ಬಂದಿದೆ. ಇದೀಗ ವೀಡಿಯೋ ವೈರಲ್ ಆಗಿದೆ.
ಪಕ್ಕದ ಮನೆಯವರಿಗೆ ಚಪ್ಪಲಿಯಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣುಗೋಪಾಲ್ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿತ್ತು. ಹೀಗಾಗಿ ಹೆಡ್ ಕಾನ್ಸ್ಟೇಬಲ್ ಚಂದ್ರಾನಾಯ್ಕ್ ಆರೋಪಿ ವೇಣುಗೋಪಾಲ್ ಬಂಧನಕ್ಕೆ ತೆರಳಿದ್ದಾರೆ. ಈ ವೇಳೆ ಅರೆಬೆತ್ತಲೆ ಸ್ಥಿತಿಯಲ್ಲೇ ವೇಣುಗೋಪಾಲ್ನನ್ನು ಠಾಣೆಗೆ ಕರೆತಂದಿರುವ ಪ್ರಸಂಗ ನಡೆದಿದೆ.
ಹೆಡ್ ಕಾನ್ಸ್ಟೇಬಲ್ ಆರೋಪಿಯನ್ನು ಕರೆತರಲು ಹೋದಾಗ ಆರೋಪಿ ವೇಣುಗೋಪಾಲ್ ಸ್ನಾನ ಮಾಡುತ್ತಿದ್ದನು. ಆಗ ಆರೋಪಿ ಅದೇ ಅರೆಬೆತ್ತಲೆ ಸ್ಥಿತಿಯಲ್ಲೇ ಕೈಲಿ ಜಗ್ ಹಿಡಿದುಕೊಂಡು ಪೊಲೀಸರ ಜತೆ ಠಾಣೆಗೆ ಬಂದಿದ್ದಾರೆ.
ಇನ್ನೂ ಆರೋಪಿ ಜಾಮೀನು ಪಡೆದು ವೇಣುಗೋಪಾಲ ಹೊರಬಂದಿದ್ದನು.ಇನ್ನೂ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಪಿ ವೇಣುಗೋಪಾಲ್ ನಾನು ಸ್ನಾನ ಮಾಡುತ್ತಿದ್ದೆ. ಸ್ನಾನ ಮುಗಿಸಿಕೊಂಡು ಬರುತ್ತೇನೆ ಎಂದು ಹೇಳಿದೆ. ಆದರೂ ಕಾನ್ಸ್ಟೇಬಲ್ ಕಾನ್ಸ್ಟೇಬಲ್ ಚಂದ್ರಾನಾಯ್ಕ್ ಕೇಳಲಿಲ್ಲ. ದುರುದ್ದೇಶದಿಂದ ನನ್ನನ್ನು ಅರೆಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
PublicNext
20/12/2021 05:23 pm