ದಾವಣಗೆರೆ: ಸ್ವಂತ ತಂದೆಯೇ ಹೆಣ್ಣು ಮಗು ಜನಿಸಿತೆಂದು ಶಿಶು ಹತ್ಯೆ ಮಾಡಿರುವ ಆರೋಪದ ಹಿನ್ನಲೆಯಲ್ಲಿ ಆರೋಪಿತ ತಂದೆ ಹಾಗೂ ತಂದೆಯ ಸಹೋದರನಿಗೆ ಸಾರ್ವಜನಿಕರು ಹಾದಿಬೀದಿಯಲ್ಲಿ ಧರ್ಮದೇಟು ಹಾಕಿರುವ ಘಟನೆ ನಗರದ ಮಿಲ್ಲತ್ ಕಾಲೋನಿಯಲ್ಲಿ ನಡೆದಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೂಡಲೇ ಆರೋಪಿತರನ್ನು ಸಾರ್ವಜನಿಕರಿಂದ ರಕ್ಷಿಸಿ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ ಹಾಗೂ ಧರ್ಮದೇಟು ನೀಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಮುಖಂಡ ಮೈನುದ್ದೀನ್ ಹಾಗೂ ಆತನ ಸಹೋದರ ಮನ್ಸೂರ್ ಸಾರ್ವಜನಿಕರಿಂದ ಧರ್ಮದೇಟು ತಿಂದವರಾಗಿದ್ದಾರೆ.3 ತಿಂಗಳ ಹಿಂದೆ ಮನ್ಸೂರ್ ದಂಪತಿಗೆ ಹೆಣ್ಣು ಮಗು ಜನಿಸಿದಕ್ಕೆ ಮನ್ಸೂರ್ ಆಕ್ಷೇಪಿಸಿ
ಹಸುಗೂಸನ್ನು ಎತ್ತಿಹಾಕಿ ಕೊಲೆಗೆ ಯತ್ನಿಸಿದ್ದ ಆರೋಪವನ್ನು ಮನ್ಸೂರ್ ಪತ್ನಿಯ ಮನೆಯವರು ಮಾಡಿದ್ದರು. ಈ ಬಗ್ಗೆ ವಿಚಾರಿಸಲು ಪಂಚಾಯತಿಗೆ ಇಬ್ಬರನ್ನು ಕರೆದಿದ್ದರೂ, ಸಹೋದರರಿಬ್ಬರೂ ಪಂಚಾಯತಿಗೆ ಗೈರಾಗಿದ್ದರು. ನಂತರ ಮುಸ್ಲಿಂ ಸಮಾಜದವರೇ ಮೈನುದ್ದೀನ್, ಮನ್ಸೂರ್ ಮನೆ ನುಗ್ಗಿ ಎಳೆದು ತಂದು ಹೊಡೆದಿದ್ದಾರೆ.
ಇದು ರಾಜಕೀಯ ಪ್ರೇರಿತ ದಾಳಿಯಾಗಿದ್ದು, ನಾವು ಮಗು ಹಾಗೂ ತಾಯಿಯನ್ನು ಪ್ರೀತಿಯಿಂದ ಸ್ವಾಗತಿಸಿದ್ದೆವು. ಹೆಣ್ಣಿನ ತವರು ಮನೆಯಲ್ಲೇ ಮಗುವನ್ನು ಬೀಳಿಸಿದ್ದಾರೆ ಹಾಗೂ ಮಗುವಿನ ತಲೆಯ ಒಳಭಾಗದಲ್ಲಿ ಪೆಟ್ಟಾಗಿರುವುದು ವೈದ್ಯರ ತಪಾಸಣೆಯಿಂದ ಗೊತ್ತಾಗಿದೆ ಲಕ್ಷಾಂತರ ಹಣ ವೆಚ್ಚ ಮಾಡಿ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೆವು ಆದ್ರೂ ಮಗು ಬದುಕುಳಿಯಲಿಲ್ಲ
ಎಂದು ಮೈನುದ್ದೀನ್ ಸ್ಪಷ್ಟನೆ ಕೊಟ್ಟಿದ್ದಾರೆ.
PublicNext
20/12/2021 04:57 pm