ಬೆಂಗಳೂರು: ಬಟ್ಟೆ ಅಂಗಡಿಯ ಮಾಲೀಕನ ಮೇಲಿನ ಸಿಟ್ಟಿನಿಂದಲೇ ಹಳೆ ಕಾರ್ಮಿಕನೊಬ್ಬ ಪ್ಲೈಟ್ ಮೂಲಕ ಬೆಂಗಳೂರಿಗೆ ಬಂದು ಅಂಗಡಿಯಲ್ಲಿ ಕಳ್ಳತನ ಮಾಡಿದ ಘಟನೆ ಈಗ ಬೆಳಕಿಗೆ ಬಂದಿದೆ.
ರಾಮ್ ದೇವ ಬಟ್ಟೆ ಅಂಗಡಿಯಲ್ಲಿ ಐದು ವರ್ಷದ ಹಿಂದೆ ಕೆಲಸ ಮಾಡುತ್ತ ಕಾರ್ಮಿಕನೇ ಕಳ್ಳತನ ಮಾಡಿದ್ದಾನೆ. ಕಳ್ಳತ ಮಾಡಲೆಂದೇ ರಾಜಸ್ಥಾನದಿಂದ ವಿಮಾನದಲ್ಲಿ ಬಂದು ಶಾಪ್‌ನಲ್ಲಿದ್ದ ಎರಡು ಲಕ್ಷ ರೂಪಾಯಿಯನ್ನ ದೋಚಿಕೊಂಡು ಹೋಗದ್ದಾನೆ.
ಕಾರ್ಮಿಕನ ಕಳ್ಳತನದ ಈ ಚಾಳಿ ಈಗೀನದಲ್ಲ ಬಿಡಿ. ಅಂಗಡಿಯಲ್ಲಿದ್ದಾಗಲೇ ಕಳ್ಳತನ ಮಾಡಿ ಸಿಕ್ಕಿಬಿದ್ದ.ಆಗ ಮಾಲೀಕರು ಈತನನ್ನ ಕೆಲಸದಿಂದಲೂ ತೆಗೆದು ಹಾಕಿದ್ದರು. ಅದೇ ಸಿಟ್ಟಿನಲ್ಲಿಯೇ ರಾಜಸ್ಥಾನದಿಂದ ಬೆಂಗಳೂರಿಗೆ ಬಂದು ಕಳ್ಳತನ ಮಾಡಿದ್ದಾರೆ.
ಬಸವನಗುಡಿಯ ಪೊಲೀಸ್ ಠಾಣೆಯಲ್ಲಿ ಈಗ ಕಾಸ್ಟ್ಲಿ ಕಳ್ಳನ ಪ್ರಕರಣ ದಾಖಲಾಗಿದೆ.
PublicNext
20/12/2021 02:11 pm