ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಚ್ಛೇದಿತ ಯುವತಿ ಆತ್ಮಹತ್ಯೆ-ಡೆತ್ ನೋಟ್‌ನಲ್ಲಿ ಏನ್ ಇತ್ತು ಗೊತ್ತೇ ?

ಬಾಗೇಪಲ್ಲಿ:ಇಬ್ಬರ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವಿಚ್ಛೇದಿತ ಯುವತಿ ಲಾಡ್ಜ್ ಕೋಣೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗೇಪಲ್ಲಿಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ನಿವಾಸಿ, ವೀಣಾ (26) ಆತ್ಮಹತ್ಯೆ ಮಾಡಿಕೊಂಡ ಯುವತಿ. ಪುನೀತ್ ಹಾಗೂ ಲಕ್ಷ್ಮಿಕಾಂತ್ ಎಂಬುವವರ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ವೀಣಾ ಈ ವಿಷಯ ಮನೆಯವರಿಗೆ ತಿಳಿಯಿತು ಅಂತಲೆ ಬಾಗೇಪಲ್ಲಿಯ ಬಾಲಾಜಿ ಲಾಡ್ಜ್‌ನಲ್ಲಿಯೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೂ ಮುಂಚೆ ಬರೆದ ಡೆತ್ ನೋಟ್‌ ನಲ್ಲಿ ಸಾವಿನ ಈ ಎಲ್ಲ ಕಾರಣವನ್ನೂಬರೆದಿದ್ದಾಳೆ.

ಮುಳಬಾಗಿಲಿನ ಮುರಳಿ ಅನ್ನೋರ ಜೊತೆಗೆ ವೀಣಾ ಕಳೆದ 8 ವರ್ಷದ ಹಿಂದೆ ಮದುವೆ ಆಗಿದ್ದಳು. ಆದರೆ ಕೆಲ ದಿನಗಳ ಹಿಂದಷ್ಟೆ ವಿಚ್ಛೇದನವನ್ನೂ ಪಡೆದಿದ್ದಳು.

ಬಾಗೇಪಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಡಿ.ಆರ್.ನಾಗರಾಜು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ. ವೀಣಾ ಪ್ರಿಯಕರ ಪುನೀತ್ ನನ್ನೂ ಈಗ ಬಂಧಿಸಲಾಗಿದೆ.

Edited By :
PublicNext

PublicNext

19/12/2021 08:33 am

Cinque Terre

40.41 K

Cinque Terre

4