ನವದೆಹಲಿ:ಗರ್ಲ್‌ಫ್ರೆಂಡ್‌ಗೆ ದುಬಾರಿ ಗಿಫ್ಟ್ ಕೊಡಲು ಕಳ್ಳತನಕ್ಕೆ ಯತ್ನಿಸಿ ಮೂವರು ಅರೆಸ್ಟ್ ಆದ ಘಟನೆ ದೆಹಲಿಯಲ್ಲಿ ನಡೆದಿದೆ. ಇಲ್ಲಿನ ಸರೋಜಿನಿ ನಗರದಲ್ಲಿ ವ್ಯಕ್ತಿಯೊಬ್ಬನ ಮನೆಗೆ ನುಗ್ಗಿ ಆತನನ್ನ ಕಟ್ಟಿಹಾಕಿ ಥಳಿಸಿ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಶುಭಂ, ಆಸಿಫ್ ಮತ್ತು ಮೊಹಮ್ಮದ್ ಶರೀಫ್ ಮುಲ್ಲಾ ಅರೆಸ್ಟ್ ಆದವರು. ಮಧ್ಯಾಹ್ನ 3.30 ರ ಸುಮಾರಿಗೆ ಸರೋಜಿನಿ ನಗರದಲ್ಲಿರುವ ಆದಿತ್ಯ ಕುಮಾರ್ ಎಂಬಾತನ ಮನೆಯ ಬೆಲ್ ಮಾಡಿದ್ದಾರೆ. ಡೋರ್ ತೆಗೆಯುತ್ತಿದ್ದಂತೆ ಮೂವರೂ ಏಕಾಏಕಿ ನುಗ್ಗಿ ಪಿಸ್ತೂಲ್ ತೋರಿಸಿದ್ದಾರೆ. ನಂತರ ಆದಿತ್ಯ ಕುಮಾರ್ನನ್ನ ಕಟ್ಟಿಹಾಕಿ ಹೊಡೆದು ಲ್ಯಾಪ್‌ಟಾಪ್, ಮೊಬೈಲ್, ಜಾಕೆಟ್, ಬಟ್ಟೆಗಳಿದ್ದ ಬ್ಯಾಗ್, ವಾಚ್,ಶೂಸ್‌ಗಳನ್ನ ತೆಗೆದುಕೊಂಡು ಹೋಗಿದ್ದಾರೆ.
ಸ್ವಲ್ಪ ಸಮಯದ ನಂತರ ಸುಧಾರಿಸಿಕೊಂಡ ಆದಿತ್ಯಕುಮಾರ್ ಸ್ಪೇರ್ ಲ್ಯಾಪ್‌ಟಾಪ್ ಮೂಲಕ ಫೇಸ್‌ಬುಕ್ನಲ್ಲಿ ಸಂಬಂಧಿಯೊಬ್ಬನಿಗೆ ಕಾಲ್ ಮಾಡಿ ಬರಲು ಹೇಳಿದ್ದಾರೆ. ನಂತರ ಇಬ್ಬರು ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ಕೊಟ್ಟಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಈ ಮೂವರನ್ನೂ ಅರೆಸ್ಟ್ ಮಾಡಿದ್ದಾರೆ.
PublicNext
18/12/2021 12:18 pm