ಮಂಡ್ಯ: ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವರ ಮುಂದೆ ಯುವಕನೋರ್ವ ಬೆತ್ತಲೆಯಾಗಿ ಹುಚ್ಚಾಟ ಮೆರೆದಿದ್ದಾನೆ.
ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಗರ್ಭಗುಡಿ ಮುಂದೆ ಕಿರುಚಾಡಿ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಹೆದರಿ ತಕ್ಷಣ ಗರ್ಭಗುಡಿ ಬಾಗಿಲು ಹಾಕಿ ಸ್ಥಾನಿಕರು ಪೂಜೆ ಮಾಡಿದ್ದಾರೆ.
ಧಾರ್ಮಿಕ ಪಾವಿತ್ರ್ಯತೆಗೆ ಈತ ಧಕ್ಕೆ ತಂದಿದ್ದಾನೆ. ನಿನ್ನೆ ರಾತ್ರಿ 9 ಗಂಟೆಯಲ್ಲಿ ನಡೆದಿರುವ ಘಟನೆ ಇದಾಗಿದ್ದು, ಯುವಕನ ಹುಚ್ಚಾಟ ದೇವಾಲಯದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯುವಕನ ಹುಚ್ಚಾಟ ಕಂಡು ಭದ್ರತಾ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ.
ನಂತರ ಯುವಕನನ್ನ ಗದರಿಸಿ ದೇವಾಲಯದಿಂದ ಹೊರಗೆ ಕಳುಹಿಸಿದ್ದಾರೆ.
ಮೇಲುಕೋಟೆಯಲ್ಲಿ ಬೆತ್ತಲಾಗಿ ಯುವಕನ ಹುಚ್ಚಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಹಾಗೂ ಇಓಗೆ ಗೆ ಡಿಸಿ ವರದಿ ಕೇಳಿದ್ದಾರೆ.ಹಾಗೂ ಐತಿಹಾಸಿಕ ಪ್ರಸಿದ್ಧ ಮೇಲುಕೋಟೆಯಲ್ಲಿ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ಡಿಸಿ ಎಸ್.ಅಶ್ವತಿ ಹೇಳಿಕೆ ನೀಡಿದ್ದಾರೆ.
PublicNext
17/12/2021 09:25 pm