ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಡುಗಿಯರಿಗೆ ಕಿರುಕುಳ ಕೊಟ್ಟಿದ್ದಕ್ಕೆ ಮೂವರು ಹುಡುಗರನ್ನು ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು…..

ಉತ್ತರಪ್ರದೇಶ : ಹುಡುಗಿಯರಿಗೆ ಕಿರುಕುಳ ಕೊಟ್ಟ ಕಾರಣ ಮೂವರು ಹುಡುಗರನ್ನು ಮರಕ್ಕ ಕಟ್ಟಿ ಸ್ಥಳೀಯ ಜನರು ಥಳಿಸಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಸುಮಾರು ಗಂಟೆಗಳ ಕಾಲ ಮೂವರೂ ಹುಡುಗರಿಗೆ ಸ್ಥಳೀಯರು ಥಳಿಸಿದ ನಂತರ ಕಿರುಕುಳಕ್ಕೊಳಗಾದ ಹುಡುಗಿಯೊಬ್ಬರ ತಂದೆ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮೂವರು ಹುಡುಗರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಪೊಲೀಸ್ ಸ್ಥಳಕ್ಕೆ ಬರುವವರಗೆ ಈ ಮೂವರನ್ನೂ ಗ್ರಾಮಸ್ಥರು ಥಳಿಸುತ್ತಲೇ ಇದ್ರು. ಪೊಲೀಸರು ಈ ಮೂವರನ್ನೂ ಸದ್ಯ ಅರೆಸ್ಟ್ ಮಾಡಿದ್ದಾರೆ.

ಹಾಗೆಯೇ ಅರೆಸ್ಟ್ ಆದ ಹುಡುಗನೊಬ್ಬನ ತಾಯಿ ಕೂಡಾ ತನ್ನ ಮಗನಿಗೆ ಹೊಡೆದ ಕುಟುಂಬವೊಂದರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ತನ್ನ ಮಗ ಮಾರ್ಕೆಟ್ನಲ್ಲಿದ್ದಾಗ ಹುಡುಗಿಯೊಬ್ಬಳ ಕುಟುಂಬದವರು ಬಂದು ವಿನಾಕಾರಣ ಹೊಡೆದಿದ್ದಾರೆ ಎಂದು ದೂರಲ್ಲಿ ಹೇಳಲಾಗಿದೆ. ಸದ್ಯ ಎರಡೂ ಕುಟುಂಬದವರಿಂದಲೂ ದೂರು ಸ್ವೀಕರಿಸಲಾಗಿದ್ದು ತನಿಖೆ ನಡೆಯುತ್ತಿದೆ.

Edited By : Shivu K
PublicNext

PublicNext

17/12/2021 04:46 pm

Cinque Terre

51.68 K

Cinque Terre

1