ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಯುವತಿ ಆತ್ಮಹತ್ಯೆ! ; ʼಸಾಕ್ಷಿʼ ನಾಶವಾದ ದಾರುಣ ಚಿತ್ರಣ

ಬೆಂಗಳೂರು: ಹುಡುಗಿ ಹೆಸ್ರು ಸಾಕಮ್ಮ. 20ರ ಹರೆಯದ ಈ ಸಾಕಮ್ಮಳನ್ನ ಕುಟುಂಬಸ್ಥರು ಸಾಕ್ಷಿ ಅಂತಾ ಕರೀತಾ ಇದ್ರು. ಹಾಸನ ಜಿಲ್ಲೆ ಚನ್ನರಾಯಪಟ್ಟಣ ಮೂಲದ ಈಕೆ ದೊಡ್ಡಬಿದರಕಲ್ಲು ಗ್ರಾಮದ ತನ್ನ ಅಕ್ಕನ ಮನೆಯಲ್ಲೀಗ ನೇಣಿಗೆ ಕೊರಳೊಡ್ಡಿದ್ದಾಳೆ!

ಸಾಕ್ಷಿ ಅಕ್ಕನ ಮನೆಯಲ್ಲಿದ್ದು, ಬೆಂಗಳೂರಿನ ಯಶವಂತಪುರದ ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿ ಮಾರ್ಕೆಟ್‌ನಲ್ಲಿ ಕೆಲಸ ಮಾಡ್ಕೊಂಡಿದ್ಲು. ಸಾಕ್ಷಿಯ ಭಾವ ಪ್ರಜ್ವಲ್‌ಗೆ ಗೋಪಾಲ್ ಎಂಬಾತ ಕರೆ ಮಾಡಿ ʼನಾನು ಬಸವೇಶ್ವರ ನಗರ ಪೊಲೀಸ್ ಠಾಣೆಯಿಂದ ಕರೆ ಮಾಡ್ತಿದ್ದೀನಿ. ಅರುಣ್ ಎಂಬ ಯುವಕ ನಿಮ್ಮ ಹೆಸರೇಳಿ ಸೂಸೈಡ್ ಅಟೆಂಮ್ಟ್ ಮಾಡ್ಕೊಂಡಿದ್ದಾನೆ. ಅವನನ್ನು ಸಾಕ್ಷಿ ಮದುವೆ ಮಾಡಿಕೊಳ್ಳಬೇಕು. ಇಲ್ಲವಾದ್ರೆ ಎಫ್‌ಐ‌ಆರ್ ದಾಖಲಿಸುತ್ತೇವೆʼ ಅಂತ ಬೆದರಿಸಿದ್ನಂತೆ. ಈ ವಿಷಯವಾಗಿ ಭಾವ ಪ್ರಜ್ವಲ್ , ಸಾಕ್ಷಿಗೆ ಫೋನ್ ಮಾಡಿ ರೆಡಿ ಆಗಿರು. ಊರಿಗೆ ಹೋಗೋಣ ಅಂದದ್ದೆ ತಡ ಸಾಕ್ಷಿ ಮನೆಯಲ್ಲಿನ‌ ಫ್ಯಾನ್ ತಗಲಾಕುವ ಕೊಂಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸಾಕ್ಷಿ ಕೆಲಸ ಮಾಡುತ್ತಿದ್ದ ಮೆಟ್ರೋ ಕ್ಯಾಶ್ ಆಂಡ್ ಕ್ಯಾರಿಯಲ್ಲಿ ಅರುಣ್‌ನ ಪರಿಚಯ ಆಗಿತ್ತಂತೆ. ಸಾಕ್ಷಿಯು ಅರುಣ್ ನೊಂದಿಗೆ ಸಹೋದರನೆಂಬ ಭಾವನೆಯಿಂದ ಸಲಿಗೆಯಿಂದ ಇದ್ದಾಳಂತೆ. ಆದ್ರೆ ಇದನ್ನು ಪ್ರೀತಿ ಎಂದು ತಪ್ಪಾಗಿ ತಿಳಿದುಕೊಂಡಿದ್ನಂತೆ ಅರುಣ್. ಕೆಲ ದಿನಗಳ ಹಿಂದೆ ಅರುಣ್, ʼನನ್ನನ್ನು ಪ್ರೀತಿಸು, ಮದುವೆಯಾಗುʼ ಎಂದು ಹಿಂಸಿಸುತ್ತಿದ್ದಾನಂತೆ. ಈ ವಿಚಾರವಾಗಿ ಸಾಕ್ಷಿ ತನ್ನ ಮನೆಯವರೊಂದಿಗೆ ಹೇಳಿಕೊಂಡಿದ್ಳಂತೆ. ಈ ನಡುವೆ ಸಾಕ್ಷಿಗೆ ಮದುವೆ ಮಾಡಿದರೆ ಈ ಸಮಸ್ಯೆ ದೂರ ಆಗುತ್ತೆ ಅಂತ ಕುಟುಂಬಸ್ಥರು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ರಂತೆ. ಈ ವಿಷಯ ತಿಳಿದ ಪಾಗಲ್ ಪ್ರೇಮಿ ಅರುಣ್ ಈಕೆಯ ಭಾವನಿಗೆ ತನ್ನ ಸ್ನೇಹಿತನಿಂದ ಕರೆ ಮಾಡಿಸಿ ಪೊಲೀಸ್ ಎಂದು ಕರೆ ಮಾಡಿದ ವಿಚಾರ ತಿಳಿಯುತ್ತಿದ್ದಂತೆ ಸಾಕ್ಷಿ ನೇಣು ಹಾಕಿಕೊಂಡಿದ್ದಾಳೆ!

ಪೀಣ್ಯ ಪೊಲೀಸರು ಪಾಗಲ್ ಪ್ರೇಮಿ ಅರುಣ್ ಹಾಗೂ ನಕಲಿ ಪೊಲೀಸ್ ಗೋಪಾಲ್‌ನನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Edited By : Shivu K
PublicNext

PublicNext

17/12/2021 02:21 pm

Cinque Terre

75.88 K

Cinque Terre

4