ಮೈಸೂರು: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಹಿಳೆಯೋರ್ವಳು ಬಕೆಟ್ ನಲ್ಲಿ ತನ್ನ ಕಂದನನ್ನು ಮುಳುಗಿಸಿ ಕೊಂದು ತಾನು ನೇಣಿಗೆ ಶರಣಾದ ಘಟನೆ ನಂಜನಗೂಡು ತಾಲೂಕಿನ ಗಟ್ಟವಾಡಿ ಗ್ರಾಮದಲ್ಲಿ ನಡೆದಿದೆ.
ಇನ್ನು ಮೃತರನ್ನು ಅನ್ನಪೂರ್ಣ (22) ಪುತ್ರ ಮೋಕ್ಷಿತ್ (2) ಎಂದು ಗುರುತಿಸಲಾಗಿದೆ. ಗಟ್ಟವಾಡಿ ಗ್ರಾಮದ ಮಹದೇವ ಪ್ರಸಾದ್ ಅಲಿಯಾಸ್ ರಚ್ಚು ಎಂಬುವವರ ಜೊತೆ ಎರಡು ವರ್ಷದ ಹಿಂದೆ ಚಾಮರಾಜನಗರ ಜಿಲ್ಲೆ ಉಮ್ಮತ್ತೂರು ಗ್ರಾಮದ ಅನ್ನಪೂರ್ಣ ಅವರ ಮದುವೆ ಮಾಡಲಾಗಿತ್ತು.
ಈ ಸುಂದರ ಕುಟುಂಬದಲ್ಲಿ ಪತಿ, ಪತ್ನಿ ಮಧ್ಯೆ ಆಗಾಗೆ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆಯೂ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಅನ್ನಪೂರ್ಣ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ನಂಜನಗೂಡು ಡಿವೈಎಸ್ ಪಿ ಗೋವಿಂದ ರಾಜು ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ ದೊಡ್ಡಕವಲಂದೆ ಪಿಎಸ್ ಐ ಮಹೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
17/12/2021 11:49 am