ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಿಧಿಯಾಸೆಗೆ ಬಸವಣ್ಣ ಮೂರ್ತಿ ಕಿತ್ತೆಸೆದು 7 ಅಡಿ ಆಳ ತೋಡಿದ ದುಷ್ಕರ್ಮಿಗಳು

ಯಾದಗಿರಿ: ನಿಧಿ ಆಸೆಗಾಗಿ ದೇವಸ್ಥಾನದ ಮುಂದಿರುವ ಬಸವಣ್ಣನ ಮೂರ್ತಿ ತೆಗೆದು ನೆಲ ಅಗೆದಿರುವ ಘಟನೆ ಯಾದಗಿರಿಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ.

ರಾಮಲಿಂಗೇಶ್ವರ ದೇವಸ್ಥಾನ ಮುಂಭಾಗದಲ್ಲಿರುವ ಬಸವಣ್ಣ ಮೂರ್ತಿಯನ್ನ ಕಿತ್ತೆಸೆದು. ಯಾರೋ ಕಿಡಿಗೇಡಿಗಳು ನಿಧಿಗಾಗಿ ಏಳು ಅಡಿ ಆಳ ತೋಡಿದ್ದಾರೆ.

ನಿನ್ನೆ ರಾತ್ರೋರಾತ್ರಿ ಅಪರಿಚಿತ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದ್ದು, ರಾಮಲಿಂಗೇಶ್ವರ ದೇವಸ್ಥಾನದ ಅರ್ಚಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By : Shivu K
PublicNext

PublicNext

16/12/2021 07:30 pm

Cinque Terre

56.28 K

Cinque Terre

0