ಪುಣೆ : ಕಾಲೇಜು ಜೀವನದಲ್ಲಿ ಪ್ರೀತಿ ಪ್ರೇಮ ಎಂದು ಅನೇಕರು ತಮ್ಮ ಬಂಗಾರದಂತಹ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಸದ್ಯ ಇಲ್ಲೊಬ್ಬ ಎಂಬಿಬಿಎಸ್ ವಿದ್ಯಾರ್ಥಿ ಪ್ರೇಯಸಿಗೆ ಉಡುಗೊರೆ ನೀಡಲು ಚಿನ್ನದಂಗಡಿಗೆ ಕನ್ನ ಹಾಕಿ ಸಿಕ್ಕಿ ಬಿದ್ದಿದ್ದಾನೆ. ಈ ಘಟನೆ ಪುಣೆಯಲ್ಲಿ ನಡೆದಿದ್ದು ಎರಡು ಚಿನ್ನದಂಗಡಿಯಲ್ಲಿ ಉಂಗುರು ಕಳ್ಳತನ ಮಾಡಿದ್ದ ಈತ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಬಿಎಸ್ 3ನೇ ವರ್ಷ ವ್ಯಾಸಂಗ ಮಾಡುತ್ತಿರುವ ಹನುಮಂತ ರೋಖಡೆ ಬಂಧಿತ.
ತನ್ನ ಗೆಳೆಯ ವೈಭವ್ ಸಂಜಯ್ ಜತೆಗೆ ಈತ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಪ್ರೇಮದಲ್ಲಿ ಸಿಲುಕಿದ್ದ ಹನುಮಂತ ಗೆಳತಿಯನ್ನು ಓಲೈಸಿಕೊಳ್ಳಲು ದುಬಾರಿ ಗಿಫ್ಟ್ ಕೊಡಲು ಮುಂದಾಗಿದ್ದ ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ಎರಡೂವರೆ ಲಕ್ಷ ಮೌಲ್ಯದ ಚಿನ್ನದ ಉಂಗುರ ವಶಕ್ಕೆ ಪಡೆದು ದೂರು ದಾಖಲಿಸಿಕೊಂಡ ಪೊಲೀಸರ ವಿಚಾರಣೆ ವೇಳೆ ತನ್ನ ಸ್ನೇಹಿತೆಯ ವಿಷಯವನ್ನು ಬಾಯಿಬಿಟ್ಟಿದ್ದಾನೆ ಈ ಹನುಮಂತ.
PublicNext
16/12/2021 06:42 pm