ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಕ್ರಮ ಸಂಬಂಧ : ಎಸ್ಕೇಪ್ ಆಗಲು 5 ನೇ ಮಹಡಿಯಿಂದ ಜಿಗಿದ ಭೂಪ..

ಜೈಪುರ: ವಿವಾಹಿತೆಯೊಂದಿಗೆ ವ್ಯಕ್ತಿಯೋರ್ವ ಅಕ್ರಮ ಸಂಬಂಧ ಹೊಂದಿದ್ದ. ಗಂಡನಿಗೆ ಗೊತ್ತಾಗದಂತೆ ಇವರ ಕಳ್ಳಾಟ ಜೋರಾಗಿತ್ತು. ಒಂದು ದಿನ ವಿವಾಹಿತ ಮಹಿಳೆಯ ಗಂಡನ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಆತನ ಕೈಯಿಂದ ತಪ್ಪಿಸಿಕೊಳ್ಳಲು ಐದನೇ ಮಹಡಿಯಿಂದ ಯುವಕನೊಬ್ಬ ಜಿಗಿದು ಪ್ರಾಣ ಕಳೆದುಕೊಂಡ ಘಟನೆ ಜೈಪುರದಲ್ಲಿ ನಡೆದಿದೆ.

ಮೊಹಿನ್ಸ್(29) ಮೃತ ಯುವಕ. ಮೂಲತಃ ಉತ್ತರಪ್ರದೇಶದವನಾಗಿರುವ ಈತನೊಂದಿಗೆ ಮಹಿಳೆಯು ಎರಡು ವರ್ಷಗಳ ಹಿಂದೆ ಓಡಿ ಹೋಗಿದ್ದು, ಲೀವ್-ಇನ್ ರಿಲೇಶನ್ ಶಿಪ್ ನಲ್ಲಿದ್ದರು. ಈ ವಿಚಾರ ತಿಳಿದ ಪತಿ ಆಕೆಯನ್ನು ಹುಡುಕಿಕೊಂಡು ಹೋಗುವಾಗ ಇಬ್ಬರು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.

ಈ ವಿಚಾರ ತಿಳಿದ ಮೊಹಿನ್ಸ್ ಗಾಬರಿಗೊಂಡು ಮನೆಯ ಬಾಲ್ಕನಿಯಿಂದ ಜಿಗಿದಿದ್ದಾನೆ.

Edited By : Nirmala Aralikatti
PublicNext

PublicNext

16/12/2021 05:10 pm

Cinque Terre

36.51 K

Cinque Terre

1