ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರುವಿಗೆ ಕೀಟಲೆ ಮಾಡಿದ ಕುಚೇಷ್ಟೆ ಮಾಡಿದ ವಿದ್ಯಾರ್ಥಿಗಳು: ವಿಡಿಯೋ ವೈರಲ್...!

ದಾವಣಗೆರೆ: ನಾವು ಶಾಲೆಯಲ್ಲಿ ವಿದ್ಯೆ ಕಲಿಸುವ ಗುರುಗಳನ್ನು ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇನ್ ನಮಃ ಎಂದು ಶಿಕ್ಷಕರನ್ನು ದೇವರಿಗೆ ಹೊಲಿಸುತ್ತೇವೆ‌.

ಆದರೆ ಇದಕ್ಕೆ ತದ್ವಿರುದ್ಧವಾಗಿ ಚನ್ನಗಿರಿ ತಾಲೂಕಿನ ನಲ್ಲೂ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪ್ರೌಢ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಹಿಂದಿ ಶಿಕ್ಷಕ ಪ್ರಕಾಶ್ ಎಂಬುವವರಿಗೆ ಕೀಟಲೆ ಮಾಡುವ ಮೂಲಕ ವಿದ್ಯೆ ಕಲಿಸುವ ಗುರುವಿಗೆ ಅವಮಾನ ಮಾಡಿದ ಘಟನೆ ನಡೆದಿದೆ.

ಪ್ರತಿ ದಿನ ಶಾಲೆಯಲ್ಲಿ ಹಿಂದಿ ತರಗತಿ ಪ್ರಾರಂಭವಾಗುತ್ತಿದ್ದಂತೆ ಶಿಕ್ಷಕ ಪ್ರಕಾಶ್ ಅವರಿಗೆ ಈ ವಿದ್ಯಾರ್ಥಿಗಳು ಹಿಂದೆಯಿಂದ ವಸ್ತುಗಳನ್ನು ಎಸೆಯುವುದು, ಕಸದ ಬುಟ್ಟಿಯನ್ನು ತಲೆ ಮೇಲೆ ಹಾಕುವುದು, ಹೊಡೆಯುವುದು ಮಾಡುತ್ತಿದ್ದಾರೆ. ಇಷ್ಟೆಲ್ಲಾ ನಡೆದರೂ ಶಿಕ್ಷಕರು ಕೂಡ ಇಂತಹ ವಿದ್ಯಾರ್ಥಿಗಳ ನೀಚ ಸಹವಾಸ ಯಾಕೆ ಅಂತ ಸುಮ್ಮನೇ ಇದ್ದಾರೆ. ನಂತರ ಈ ವಿಷಯ ತಿಳಿದ ಪ್ರಾಂಶುಪಾಕರು ವಿದ್ಯಾರ್ಥಿಗಳು ಪೋಷಕರನ್ನು ಕರೆಸಿ ಮತ್ತೆ ಇಂತಹ ಘಟನೆ ನಡೆದರೆ ಶಿಸ್ತು ಕ್ರಮ ತೆಗೆದುಕೊಳ್ಳವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿದ್ಯಾರ್ಥಿಗಳು ಈ ರೀತಿ ಕೀಟಲೆ ಮಾಡಿ ಅವರೆ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ. ಇದೀಗ ಆ ವಿಡಿಯೋ ಸಮಾಜಿ ಜಾಲ ತಣಗಳಲ್ಲಿ ಹರಿದಾಡುತ್ತಿದ್ದು‌. ನೋಡಿದವರು ಇಂತಹ ನೀಚ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Edited By : Nagesh Gaonkar
PublicNext

PublicNext

10/12/2021 03:57 pm

Cinque Terre

58.54 K

Cinque Terre

44