ಕೊಪ್ಪಳ: ಕಳೆದ 8 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರೂ ಗಂಡನ ಜೊತೆ ಸಂಸಾರ ಮಾಡಲಾಗದೇ ತವರು ಮನೆಯಲ್ಲಿಯೇ ದಿನದೂಡುತ್ತಿದ್ದ ಯುವತಿ ಕೊನೆಗೂ ಗಂಡನ ಮನೆ ಸೇರಿದ್ದಾಳೆ.
ಹೌದು ಜಾತಿ ಕಾರಣ ಹೇಳಿ ಮದುವೆ ನಡೆದಿದ್ದರೂ ಒಟ್ಟಾಗಿ ಬಾಳಲು ಬಿಡದೆ ಯುವತಿಗೆ, ಆಕೆಯ ಕುಟುಂಬಸ್ಥರೇ ಚಿತ್ರಹಿಂಸೆ ನೀಡುತ್ತಿದ್ದರು. ಇಂತಹ ಘಟನೆ ನಡೆದಿರುವುದು ಜಿಲ್ಲೆಯ ಯಲಬುರ್ಗಾದಲ್ಲಿ.ಇಲ್ಲಿನ ಅಮರ ಪ್ರೇಮಿಗಳಾದ ವಿದ್ಯಾಶ್ರೀ ಹಾಗೂ ಪ್ರಶಾಂತ ಕಟ್ಟಿಮನಿ 2013 ರಲ್ಲಿ ರಿಜಿಸ್ಟರ್ ಮದುವೆ ಆಗಿದ್ದರು ಕೂಡ ಯುವತಿ ಕುಟುಂಬದ ವಿರೋಧ ಇದ್ದುದರಿಂದ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು.ಇದೀಗ 3 ದಿನದ ಹಿಂದೆ ಯುವತಿ ಧೈರ್ಯ ಮಾಡಿ ಪ್ರೀತಿಸಿ ಮದುಯಾದ ಯುವಕನ ಮನೆಗೆ ಬಂದಿದ್ದಾಳೆ ಇದರಿಂದ ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ತಕರಾರು ಎತ್ತಿದ್ದಾರೆ.
ಎಸ್ಸಿ ವರ್ಗಕ್ಕೆ ಸೇರಿದ ಪ್ರಶಾಂತ ಹಾಗು ಲಿಂಗಾಯತ ಜಾತಿಯ ವಿದ್ಯಾಶ್ರೀ ಪ್ರೀತಿಸಿ ಮದುವೆಯಾಗಿದ್ದರು.ಯುವತಿ ಮೊದಲ ವರ್ಷದ ಇಂಜಿನಿಯರಿಂಗ್ ಓದುತ್ತಿರುವಾಗ ವಿವಾಹವಾಗಿದ್ದು,ಜಾತಿ ವಿಷಯಕ್ಕೆ ವಿವಾಹಿತರನ್ನು ಬೇರ್ಪಡಿಸಿ ಕಿರಿಕ್ ಮಾಡುತ್ತಿರುವ ಯುವತಿ ಕುಟುಂಬದ ವಿರುದ್ಧ ದೂರು ನೀಡಿ ಎಸ್ಪಿ ಮೊರೆ ಹೋಗಿದ್ದಾರೆ ವಿವಾಹಿತ ಜೋಡಿ.
PublicNext
09/12/2021 02:02 pm