ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರದ ಮೋರ್ಗನ್ಸ್ ಗೇಟ್ ನಲ್ಲಿ ನಡೆದಿದೆ.
ಇನ್ನು ಮೃತರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ್ ಗ್ರಾಮದವರಾಗಿದ್ದು ಮಂಗಳೂರಿನ ಮೋರ್ಗನ್ಸ್ ಗೇಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ನಾಗೇಶ್ ಶೆರಗುಪ್ಪಿ(30),ವಿಜಯಲಕ್ಷ್ಮಿ (26) ,ಮಕ್ಕಳಾದ ಸ್ವಪ್ನ(8)ಸಮರ್ಥ್ (4) ಮೃತ ದುರ್ದೈವಿಗಳು,ಪತ್ನಿ ಮಕ್ಕಳಿಗೆ ವಿಷ ನೀಡಿ ನಾಗೇಶ್ ಶಿರಗುಪ್ಪಿ ನೇಣಿಗೆ ಶರಣಾಗಿದ್ದಾರೆ.
ನಾಗೇಶ್ ಚಾಲಕನಾಗಿದ್ದು, ವಿಜಯಲಕ್ಷ್ಮಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
PublicNext
08/12/2021 01:00 pm