ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೈಲರ್ ಪತಿ ಸರಿಯಾಗಿ ಬ್ಲೌಸ್ ಹೊಲಿಯಲಿಲ್ಲ : ಮನನೊಂದ ಪತ್ನಿ ಆತ್ಮಹತ್ಯೆ

ಹೈದರಾಬಾದ್ : ಇತ್ತೀಚಿನ ದಿನಗಳಲ್ಲಿ ಮನಸ್ಸುಗಳು ಎಷ್ಟರ ಮಟ್ಟಿಗೆ ದುರ್ಬಲವಾಗುತ್ತಿವೆ ಎಂದರೆ ಕ್ಷುಲಕ ಕಾರಣಕ್ಕೂ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಸದ್ಯ ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಟೈಲರ್ ಆದ ಗಂಡ ಹೆಂಡತಿ ಬ್ಲೌಸ್ ಸರಿಯಾಗಿ ಹೊಲಿಯಲಿಲ್ಲವೆಂದು ಪತಿಯೊಂದಿಗೆ ಮಹಿಳೆ ಜಗಳವಾಡಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀನಿವಾಸ್ ಪತ್ನಿ ವಿಜಯಲಕ್ಷ್ಮಿ (36) ಮೃತರು. ಬ್ಲೌಸ್ ವಿಚಾರವಾಗಿ ದಂಪತಿ ನಡುವೆ ನಡೆದಿರುವ ಜಗಳ ಪತ್ನಿ ಪ್ರಾಣವನ್ನು ಕಳೆದುಕೊಳ್ಳವ ಮಟ್ಟಿರುವುದು ದುರಂತ. ದಂಪತಿ ಹೈದರಾಬಾದ್ ನ ಅಂಬರಪೇಟ್ ನಲ್ಲಿ ವಾಸವಾಗಿದ್ದರು. ಶ್ರೀನಿವಾಸ್ ಟೈಲರ್ ಆಗಿದ್ದು, ಸೀರೆ ವ್ಯಾಪಾರವನ್ನೂ ಮಾಡುತ್ತಿದ್ದರು. ಶನಿವಾರ ಪತ್ನಿ ವಿಜಯಲಕ್ಷ್ಮಿಗೆ ಬ್ಲೌಸ್ ಹೊಲಿದು ಕೊಟ್ಟಿದ್ದಾರೆ. ಆದರೆ ಆಕೆಗೆ ಬ್ಲೌಸ್ ಇಷ್ಟವಾಗಿರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ.

ಇದೇ ಸಿಟ್ಟಿನಿಂದ ವಿಜಯಲಕ್ಷ್ಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಶ್ರೀನಿವಾಸ್ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಂಬರ್ಪೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Nirmala Aralikatti
PublicNext

PublicNext

06/12/2021 03:03 pm

Cinque Terre

40.79 K

Cinque Terre

2