ಬೆಂಗಳೂರು: ಗುಲ್ಜಾರಾ ಬಾನು ಎಂಬ ಮಹಿಳೆಯಿಂದ ಹೆಚ್ಚು ಕಡಿಮೆ 24 ಮಂದಿ ಮೋಸ ಹೋದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಅದು ಈಗ ಬೆಳಕಿಗೆ ಬಂದಿದೆ.
ಗುಲ್ಜಾರಾ ಬಾನು ಸ್ಕೀಂ ಗೆ ಮೊದಲ ಬಲಿ ಯಾದವರೇ ರೇಷನ್ ಅಂಗಡಿ ನಡೆಸುತ್ತಿದ್ದ ನಯೀಮ್ ಎಂಬ ವ್ಯಕ್ತಿ. ಬೆಂಗಳೂರಿನ ಹೆಸರಾಂತ ಶೋರೂಮ್ ಗಳಿಗೆ ಹೆಚ್ಚು ಹೆಚ್ಚು ಗ್ರಾಹಕರನ್ನ ಕರೆದು ತಂದರೆ ನಿಮಗೆ ಪುಗಸಟ್ಟೆ ಆಗಿಯೆ ದುಡ್ಡು ಬರುತ್ತದೆ ಎಂತಲೇ ಗುಲ್ಜಾರಾ ಬಾನು ನಂಬಿಸಿದ್ದಾಳೆ.
ಆಕೆಯ ಮಾತಿಗೆ ಮರುಳಾಗಿ ಪುಗಸಟ್ಟೆ ಹಣಗಳಿಸೋ ಸ್ಕೀಂ ಗೆ ನಯೀಮ್ ಜಾಯಿನ್ ಆಗಿದ್ದಾರೆ. ಹೆಸರಾಂತ ಶೋರೂಮ್ ಗೆ ಗ್ರಾಹಕರನ್ನ ಕರೆತರುವ ಕೆಲಸವನ್ನೂ ಮಾಡಿದ್ದಾರೆ. ಹೆಚ್ಚು ಕಡಿಮೆ 24 ಜನರನ್ನ ಗ್ರಾಹಕರನ್ನಾಗಿಯೂ ಮಾಡಿದ್ದಾನೆ.
ನಯೀಮ್ ಕರೆತಂದ ಗ್ರಾಹಕರಿಗೆ ಶೋರೂಮ್ ನಿಂದ ಕಾರು-ಬೈಕು-ಬೆಲೆ ಬಾಳುವ ವಸ್ತುಗಳ ಖರೀದಿಯ ಇಎಂಐ ಕಟ್ಟು ಅಂತ ಕರೆ ಬಂದಾಗಲೇ ಇದು ಮೋಸ ಅಂತ ನಯೀಮ್ ಗೊತ್ತಾಗಿದೆ. ಕೂಡಲೇ ನಯೀಮ್ ಪೊಲೀಸರಿಗೆ ದೂರು ಕೊಟ್ಟಿದ್ದಾನೆ.ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್,ಮುಜಾಹಿದ್,ಹಫೀಜ್,ಮನ್ಸೂರ್,ಲೋಕೇಶ್,ಕಾರ್ತಿಕ್ ಸೇರಿದಂತೆ ಇನ್ನು ಅನೇಕರನ್ನ ಹುಡುಕುತ್ತಿದ್ದಾರೆ.
PublicNext
06/12/2021 01:55 pm