ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರದೀಪ ಯಂಟಮಾನ ಕೊಲೆ ಕೇಸ್; 9 ಜನ ಆರೋಪಿಗಳ ಬಂಧನ

ವಿಜಯಪುರ: ಆಲಮೇಲ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ, ರೌಡಿ ಶೀಟರ್ ಪ್ರದೀಪ ಯಂಟಮಾನ (37) ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಆಲಮೇಲ ಠಾಣೆ ಪೊಲೀಸರು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಭೀಮು ಮೇಲಿನಮನಿ, ಸಂಜು ಮೇಲಿನಮನಿ, ಗೌತಮ ಮೇಲಿನಮನಿ, ಮುತ್ತು ಮೇಲಿನಮನಿ, ಸಂಗಪ್ಪ ಮೇಲಿನಮನಿ, ಶಿವಪುತ್ರ ಮೇಲಿನಮನಿ, ವೀರೇಶ ಮೇಲಿನಮನಿ, ಸತೀಶ ಮೇಲಿನಮನಿ ಹಾಗೂ ದೇವು ಮೇಲಿನಮನಿ ಬಂಧಿತ ಆರೋಪಿಗಳು.

ಆಲಮೇಲ ಪಟ್ಟಣದ ಗಣೇಶ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೊನ್ನೆ (ಗುರುವಾರ) ರಾತ್ರಿ 1 ಗಂಟೆಗೆ ಪ್ರದೀಪ ಅವರನ್ನು ಕೊಲೆ ಮಾಡಲಾಗಿತ್ತು. ಪಟ್ಟಣ ಪಂಚಾಯತಿ ಚುನಾವಣೆ ವಿಚಾರವಾಗಿ ಈ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಆಲಮೇಲ ಪೊಲೀಸ್ ಠಾಣೆಯಲ್ಲಿ 13 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರಲ್ಲಿ 9 ಜನರನ್ನು 24 ಗಂಟೆಯ ಒಳಗೆ ಬಂಧಿಸಲಾಗಿದೆ.

Edited By : Vijay Kumar
PublicNext

PublicNext

04/12/2021 05:54 pm

Cinque Terre

53.18 K

Cinque Terre

1