ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

3 ವರ್ಷದಿಂದ ಸಿಗದಿರಲು ಅಪರಾಧಿ ಮಾಡಿದ ಮಾಸ್ಟರ್ ಪ್ಲ್ಯಾನ್ ಏನು?

ಚಾಮರಾಜನಗರ: ಜೀವಾವಧಿ ಶಿಕ್ಷೆಗೊಳಗಾಗಿದ್ದ ಅಪರಾಧಿಯೊಬ್ಬ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪೊಲೀಸರ ಕೈಯಿಂದ ಪರಾರಿಯಾಗಿ ಕಳೆದ 3 ವರ್ಷಗಳ ಕಾಲ ಕಣ್ಮರೆಯಾಗಿದ್ದ. ಹೀಗೆ ತಪ್ಪಿಸಿಕೊಂಡ ಅಪರಾಧಿ ಯಾರಿಗೆ ಸಿಗದಿರಲು ಮಾಡಿದ ಮಾಸ್ಟರ್ ಪ್ಲಾನ್ ರೋಚಕವಾಗಿದೆ. ಹೌದು ಅಂದು ಪೊಲೀಸರಿಂದ ತಪ್ಪಿಸಿಕೊಂಡ ವ್ಯಕ್ತಿ ಚಾಮರಾಜನಗರ ಗಾಳಿಪುರ ಬಡಾವಣೆಯ ರಫೀಕ್ 3 ವರ್ಷಗಳಿಂದ ಪೋನ್ ಬಳಸದೇ ಇರುವುದು ಇವನ್ನನ್ನು ಹಡುಕಲು ಅಸಾಧ್ಯವಾಗುವಂತೆ ಮಾಡಿತ್ತು.

ಈತನ ವಿರುದ್ಧ ಮೈಸೂರು, ಚಾಮರಾಜನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ 9 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಈತ ಬಳ್ಳಾರಿಯಲ್ಲಿ ಬೀದಿ ಬದಿಯಲ್ಲಿ ಪರೋಟ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಚಾಮರಾಜನಗರ ಪೊಲೀಸರು ಬಳ್ಳಾರಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

Edited By : Nirmala Aralikatti
PublicNext

PublicNext

03/12/2021 11:04 pm

Cinque Terre

59.82 K

Cinque Terre

1

ಸಂಬಂಧಿತ ಸುದ್ದಿ