ನವದೆಹಲಿ : ಮನೆಯಲ್ಲಿಯೇ ಮಕ್ಕಳಿಗೆ ರಕ್ಷಣೆ ಇಲ್ಲಾ ಎಂದರೆ ನಿಜಕ್ಕೂ ಶಾಕ್ ಆಗುತ್ತದೆ. ಹೌದು ಇಲ್ಲೊಂದು ಪ್ರಕರಣದಲ್ಲಿ ಮಲತಂದೆಯಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವಾಗಿರುವ ಘಟನೆ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ಹೌದು ಬಾಲಕಿ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಬಡಮಕ್ಕಳಿಗಾಗಿಯೇ ಇರುವ ಸಂಸ್ಥೆಯೊಂದರಲ್ಲಿ ಉಳಿದುಕೊಂಡಿದ್ದಳು. ರಜೆಗೆಂದು ದೆಹಲಿಗೆ ಬಂದ ವೇಳೆ ಮಲತಂದೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿರುವುದಾಗಿ ಉಪ ಪೊಲೀಸ್ ಆಯುಕ್ತ(ದಕ್ಷಿಣ)ಬೆನಿಟಾ ಮೇರಿ ಜೈಕರ್ ತಿಳಿಸಿದ್ದಾರೆ.
ಬಾಲಕಿಯ ತಾಯಿ ಮತ್ತು ಮಲತಂದೆ ಚಿರಾಗ್ ದೆಹಲಿಯ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸದ್ಯ ಕ್ರೂರಿ ಮಲತಂದೆಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
PublicNext
30/11/2021 01:34 pm