ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಆಸ್ತಿಗಾಗಿ ಶವದ ಮುಂದೆ ಹೈಡ್ರಾಮಾ; ಖಾಲಿ ಪತ್ರಕ್ಕೆ ಮೃತ ವೃದ್ಧೆಯ ಹೆಬ್ಬೆಟ್ಟು ಒತ್ತಿಕೊಂಡ್ರು!

ಮೈಸೂರು: 'ಹಣ ಕಂಡರೆ ಹೆಣ ಬಾಯಿ ಬಿಡುತ್ತೆ' ಎನ್ನುವ ಮಾತನನ್ನ ನಮ್ಮ ಹಿರಿಯರು ಸುಮ್ಮನೆ ಹೇಳಿದ್ದಾರೆಯೇ. ಕೆಲವರು ಹಣ, ಆಸ್ತಿಗೆ ಕೊಡುವ ಕಿಮ್ಮತ್ತನ್ನು ಸಂಬಂಧಕ್ಕೆ ಕೊಡುವುದಿಲ್ಲ. ಹೀಗೆ ಆಸ್ತಿಗಾಗಿ ಶವದ ಮುಂದೆಯೇ ಹೈಡ್ರಾಮಾ ನಡೆದಿದ್ದು, ಈ ಅಮಾನವೀಯ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು. ಅಮಾನವೀಯ ಘಟನೆ ಮೈಸೂರು ಮತ್ತು ಮಂಡ್ಯ ಗಡಿಭಾಗದ ಗ್ರಾಮವೊಂದರಲ್ಲಿ ಸಂಭವಿಸಿದೆ ಎನ್ನಲಾಗಿದೆ. ಮೃತ ವೃದ್ಧೆಯ ಅಂತ್ಯಸಂಸ್ಕಾರ ಇನ್ನು ಕೆಲವೇ ಕ್ಷಣದಲ್ಲಿ ನಡೆಯಬೇಕು ಅನ್ನುವಷ್ಟರಲ್ಲಿ ಹೆಣದ ಮುಂದೆಯೇ ಮಹಾ ವಂಚನೆ ನಡೆದಿದೆ.

ಮೃತರ ಹೆಬ್ಬೆಟ್ಟಿನ ಗುರುತು ಪಡೆದು ಆಸ್ತಿ ಲಪಟಾಯಿಸುವುದು ಕಾನೂನು ಪ್ರಕಾರ ತಪ್ಪು. ಆದರೂ ಮೃತರ ಕುಟುಂಬಕ್ಕೆ ಸಂಬಧಿಸಿದ ಮಹಿಳೆಯೊಬ್ಬರು ತನ್ನ ಕಡೆಯವರ ಜತೆ ಬಂದು ಹತ್ತಾರು ಖಾಲಿ ಬಾಂಡ್​ ಪೇಪರ್​ಗಳಿಗೆ ಶವದ ಹೆಬ್ಬೆಟ್ಟಿನಿಂದ ಸಹಿ ಒತ್ತಿಕೊಂಡಿದ್ದಾರೆ. ಹೀಗೆ ಮಾಡುವುದು ತಪ್ಪು ಎಂದು ಸ್ಥಳದಲ್ಲಿದ್ದ ಸಂಬಂಧಿಕರು ಎಷ್ಟೇ ಹೇಳಿದರೂ ಮಹಿಳೆ ವಾದಿಸಿದ್ದಾರೆ. ಬಳಿಕ ಖಾಲಿ ಪತ್ರಗಳನ್ನು ಸಂಬಂಧಿಕರು ಪಕ್ಕದಲ್ಲೇ ಇರುವ ತಮ್ಮ ಮನೆಗೆ ರವಾನಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಮಹಿಳೆಯ ವಿರುದ್ಧ ಕಿಡಿಕಾರಿದ್ದಾರೆ.

Edited By : Manjunath H D
PublicNext

PublicNext

28/11/2021 01:07 pm

Cinque Terre

103.55 K

Cinque Terre

8