ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ಹಣಕ್ಕಾಗಿ ಅತ್ತೆ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ರೌಡಿ ಅಳಿಯ

ನೆಲಮಂಗಲ: ಖರ್ಚಿಗೆ ಹಣ ಕೊಡದ ಅತ್ತೆಯ ಮೇಲೆ ಪುಂಡ ಅಳಿಯ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಪರಿಣಾಮ ಅತ್ತೆ ಆಸ್ಪತ್ರೆ ಸೇರಿದ್ದಾಳೆ.

ನೆಲಮಂಗಲದ ಬಿಲ್ಲಿನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಖರ್ಚಿಗೆ ಅಂತ ಅಳಿಯ ಶ್ರೀರಾಮ್ 10 ಸಾವಿರ ಹಣ ಕೇಳಿದ್ದ. ನನ್ನ ಬಳಿ ಹಣ ಇಲ್ಲ ಎಂದು ಅತ್ತೆ ಸರಸ್ವತಮ್ಮ ಹೇಳಿದ್ದಾಳೆ. ಆಗ ಶ್ರೀರಾಮ್ ಪತ್ನಿ ಚೈತ್ರಳೊಂದಿಗೆ ಜಗಳಕ್ಕೆ ಇಳಿದಿದ್ದಾನೆ. ಈ ಜಗಳದಲ್ಲಿ ಮಧ್ಯ ಪ್ರವೇಶಿಸಿದ ಅತ್ತೆಯ ಮೇಲೆ ಶ್ರೀರಾಮ್ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಡ ಅತ್ತೆಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ . ಈ ಬಗ್ಗೆ ಹಲ್ಲೆಗೊಳಗಾದ ಸರಸ್ವತಮ್ಮ ಅವರ ಮಗಳು ಚೈತ್ರ ದಾಬಸ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಹಲ್ಲೆ ಆರೋಪಿ ಶ್ರೀರಾಮ್ ತಲೆ ಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

Edited By : Nagaraj Tulugeri
PublicNext

PublicNext

27/11/2021 04:06 pm

Cinque Terre

36.58 K

Cinque Terre

0