ಮಂಗಳೂರು: ಮಂಗಳೂರಲ್ಲಿ ಆರೋಗ್ಯ ಇಲಾಖೆ ಅಧಿಕಾರಿಯ ಕಾಮ ಪುರಾಣ ಬಯಲಾಗಿದೆ. ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಹಾಗೂ ಆಯುಷ್ಮಾನ್ ನೋಡೆಲ್ ಆಫೀಸರ್ ಕೂಡ ಆಗಿರುವ ರತ್ನಾಕರ್ ತನ್ನ ಕಚೇರಿಯ 9 ಮಹಿಳಾ ಸಿಬ್ಬಂದಿಯೊಂದಿಗೆ ಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಸ್ತ್ ಮಜಾ ಮಾಡಿರುವ ವೀಡಿಯೊ ಬಟಾಬಯಲಾಗಿದೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿರೋ ಕಚೇರಿಯ ಮಹಿಳಾ ಸಿಬ್ಬಂದಿ ಜೊತೆ ನಿತ್ಯ ಚೆಲ್ಲಾಟವಾಡುವ ಈ ಅಧಿಕಾರಿ
ಚೆಲ್ಲಾಟಕ್ಕೆ ಸಹಕರಿಸದ ಸಿಬ್ಬಂದಿಗೆ ಟಾರ್ಚರ್ ಕೊಡುತ್ತಿದ್ದ. ಅಲ್ಲದೆ, ಮಹಿಳಾ ಸಿಬ್ಬಂದಿಯನ್ನು ಕರೆದುಕೊಂಡು ಟ್ರಿಪ್ ಹೋಗುತ್ತಿದ್ದ. ವಿಪರ್ಯಾಸವೆಂದರೆ ರತ್ನಾಕರನ ಆಟಾಟೋಪದ ವಿರುದ್ದ ಈವರೆಗೆ ಮಹಿಳಾ ಸಿಬ್ಬಂದಿ ದೂರೇ ನೀಡದೇ ಆತನಿಗೆ ಕರ್ತವ್ಯದ ಅವಧಿಯಲ್ಲಿ ಅನೈತಿಕ ವರ್ತನೆಗೆ ಸಹಕರಿಸಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.
ಸಾಮಾಜಿಕ ತಾಣಗಳಲ್ಲಿ ಈ ಎಲ್ಲ ಅಶ್ಲೀಲ ವೀಡಿಯೊ ವೈರಲ್ ಆದ ಬೆನ್ನಲ್ಲೇ ಜಿಲ್ಲಾಧಿಕಾರಿಯವರ ಗಮನಕ್ಕೆ ಈ ವಿಚಾರ ಬಂದಿದ್ದು, ರತ್ನಾಕರ್ ನನ್ನು ಸಸ್ಪೆಂಡ್ ಮಾಡಲು ಆರೋಗ್ಯ ಇಲಾಖೆಗೆ ಡಿ.ಸಿ. ರಾಜೇಂದ್ರ ಸೂಚಿಸಿದ್ದಾರೆ.
PublicNext
26/11/2021 10:04 am