ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಮಾಂಗಲ್ಯ ಕಸಿದು ಪರಾರಿಯಾಗುತ್ತಿದ್ದ 7 ಮಂದಿ ಅರೆಸ್ಟ್

ದಾವಣಗೆರೆ: ಮಹಿಳೆ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ದವರನ್ನು ಬಂಧಿಸಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕ್ರೂಸರ್​ ವಾಹನದಲ್ಲಿ ಪರಾರಿಯಾಗುತ್ತಿದ್ದ 7 ಜನರನ್ನು ಲಿಂಗದಹಳ್ಳಿ ಬಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ನಲ್ಕುದುರೆ ಗ್ರಾಮದ ಬಳಿ ಮಹಿಳೆ ಸರ ಕದ್ದು ಆರೋಪಿಗಳು ಎಸ್ಕೇಪ್ ಆಗಿದ್ದರು. ಬಳಿಕ ಆರೋಪಿಗಳನ್ನು ಬೆನ್ನಟ್ಟಿದ ಚನ್ನಗಿರಿ ಠಾಣೆಯ ಪೊಲೀಸರು, ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬಂಧಿತ ಆರೋಪಿಗಳಿಂದ ಚಿನ್ನದ ಸರ, ನಕಲಿ ಪಿಸ್ತೂಲ್ ವಶಕ್ಕೆ​ ಪಡೆಯಲಾಗಿದೆ. ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

24/11/2021 08:09 am

Cinque Terre

32.69 K

Cinque Terre

0